ADVERTISEMENT

ಗೋಧಿ ಸೇರಿ ಆರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

ಪಿಟಿಐ
Published 21 ಸೆಪ್ಟೆಂಬರ್ 2020, 16:39 IST
Last Updated 21 ಸೆಪ್ಟೆಂಬರ್ 2020, 16:39 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಗೋಧಿ ಸೇರಿದಂತೆ ಆರು ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು(ಎಂಎಸ್‌ಪಿ) ಕೇಂದ್ರ ಸರ್ಕಾರ ಶೇ 6ರವರೆಗೆ ಸೋಮವಾರ ಹೆಚ್ಚಿಸಿದೆ.

ಹಿಂಗಾರು ಅವಧಿಯ ಪ್ರಮುಖ ಬೆಳೆಯಾದ ಗೋಧಿಯ ಎಂಎಸ್‌ಪಿಯನ್ನು ₹ 50 ಏರಿಕೆ ಮಾಡಲಾಗಿದ್ದು, ಕ್ವಿಂಟಲ್‌ಗೆ ₹1,975 ನಿಗದಿಪಡಿಸಲಾಗಿದೆ ಎಂದು ಲೋಕಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್ ತಿಳಿಸಿದರು. ಜೊತೆಗೆ ಬೇಳೆಕಾಳು, ಕಡಲೆ, ಜವೆ, ಸಾಸಿವೆ,ಕುಸುಂಬೆ ಹೂವಿನ ದಳದ(ಸ್ಯಾಫ್ಲವರ್‌) ಎಂಎಸ್‌ಪಿಯನ್ನೂ ಹೆಚ್ಚಿಸಲಾಗಿದೆ. ವಿರೋಧ ಪಕ್ಷಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳನ್ನು ಸಂಸತ್‌ ಅಂಗೀಕರಿಸಿದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT