ADVERTISEMENT

ಅಂಗವಿಕಲ ಮಕ್ಕಳಿಗೆ ನೆರವು: ‘ಅಂಗನವಾಡಿ ಶಿಷ್ಟಾಚಾರ’ಕ್ಕೆ ಕೇಂದ್ರ ಸರ್ಕಾರ ಚಾಲನೆ

ಪಿಟಿಐ
Published 28 ನವೆಂಬರ್ 2023, 13:20 IST
Last Updated 28 ನವೆಂಬರ್ 2023, 13:20 IST
ಸ್ಮೃತಿ ಇರಾನಿ
ಸ್ಮೃತಿ ಇರಾನಿ   

ನವದೆಹಲಿ: ಅಂಗವಿಕಲ ಮಕ್ಕಳನ್ನು ಪತ್ತೆ ಮಾಡುವುದು ಹಾಗೂ ಅವರಿಗೆ ನೆರವಾಗುವ ಕುರಿತು ಅಂಗನವಾಡಿ ಕಾರ್ಯಕರ್ತರು ಅನುಸರಿಸಬೇಕಾದ ಶಿಷ್ಟಾಚಾರಕ್ಕೆ ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿದೆ.

‘ಅಂಗವಿಕಲ ಮಕ್ಕಳಿಗಾಗಿ ಅಂಗನವಾಡಿ ಶಿಷ್ಟಾಚಾರ’ಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ‘ಈ ಶಿಷ್ಟಾಚಾರ ದೇಶದಾದ್ಯಂತ ಅನ್ವಯವಾಗಲಿದ್ದು, ಇದೇ ಮೊದಲ ಬಾರಿಗೆ ಅಂಗನವಾಡಿ ಕಾರ್ಯಕರ್ತರು ಮಕ್ಕಳಲ್ಲಿನ ಅಂಗವೈಕಲ್ಯದಂತಹ ಸಮಸ್ಯೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗುವರು’ ಎಂದು ಹೇಳಿದರು.

‘ಸಮುದಾಯದ ದೃಷ್ಟಿಕೋನದಿಂದ ಅವಲೋಕಿಸಿದರೆ, ಇದು ಮೌನ ಕ್ರಾಂತಿಯೇ ಆಗಿದೆ. ಅಂಗವೈಕಲ್ಯ ಎಂಬುದು ಮಗುವಿಗೆ ಸವಾಲು ಅಲ್ಲ, ಬದಲಾಗಿ ಮಗುವಿಗೆ ಸಹಾಯಹಸ್ತ ಚಾಚುವುದಕ್ಕಾಗಿ ಸಮಾಜಕ್ಕೆ ಒದಗಿ ಬಂದಿರುವ ಅವಕಾಶ ಎಂಬ ಸಂದೇಶವನ್ನು ಅಂಗನವಾಡಿ ಕಾರ್ಯಕರ್ತೆಯರು ಬಿತ್ತರಿಸುವರು’ ಎಂದು ಹೇಳಿದರು.

ADVERTISEMENT

‘ಅಂಗವಿಕಲ ಮಕ್ಕಳನ್ನು ಶಾಲಾ ಶಿಕ್ಷಣದ ಮುಖ್ಯವಾಹಿನಿಗೆ ತರಬೇಕು ಎಂಬುದಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ–2020 ಕೂಡ ಒತ್ತು ನೀಡುತ್ತದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.