ADVERTISEMENT

ಚೀನಾ ನಂಟಿನ 138 ಬೆಟ್ಟಿಂಗ್ ಆ್ಯಪ್, 94 ಸಾಲ ಆ್ಯಪ್‌ ನಿಷೇಧಿಸಲು ಮುಂದಾದ ಕೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2023, 7:47 IST
Last Updated 5 ಫೆಬ್ರುವರಿ 2023, 7:47 IST
   

ನವದೆಹಲಿ: ಚೀನಾದೊಂದಿಗೆ ಸಂಪರ್ಕ ಹೊಂದಿರುವ 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ಸಾಲ ನೀಡುವ 94 ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿರುವುದಾಗಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಭಾನುವಾರ ಹೇಳಿದೆ.

ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಗೃಹ ಸಚಿವಾಲಯ ನೀಡಿದ ಸೂಚನೆ ಮೇರೆಗೆ ಈ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಚೀನಾದಲ್ಲಿ ನೆಲೆ ಹೊಂದಿರುವ ಅಥವಾ ಚೀನಾ ಜೊತೆ ನಂಟು ಹೊಂದಿರುವ ಒಟ್ಟು 59 ಮೊಬೈಲ್‌ ಅಪ್ಲಿಕೇಷನ್‌ಗಳನ್ನು (ಆ್ಯಪ್‌ಗಳು) ಕೇಂದ್ರ ಸರ್ಕಾರವು 2020ರಲ್ಲಿ ಮೊದಲ ಬಾರಿಗೆ ನಿಷೇಧಿಸಲಾಗಿತ್ತು. ಅದಾದ ನಂತರವೂ, ಚೀನಾ ಮೂಲದ ಹಲವು ಆ್ಯಪ್‌ಗಳನ್ನು ಭಾರತ ನಿರ್ಬಂಧಿಸಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.