ADVERTISEMENT

ಹೆಣ್ಣುಮಕ್ಕಳೊಂದಿಗೆ ಸಭ್ಯತೆಯಿಂದಿರಲು ದೆಹಲಿ ಶಾಲೆಗಳಲ್ಲಿ ಬಾಲಕರಿಗೆ ಪ್ರತಿಜ್ಙೆ

ಪಿಟಿಐ
Published 13 ಡಿಸೆಂಬರ್ 2019, 20:15 IST
Last Updated 13 ಡಿಸೆಂಬರ್ 2019, 20:15 IST
   

ನವದೆಹಲಿ: ಹುಡುಗಿಯರ ಜತೆ ಹೇಗೆ ಸಭ್ಯವಾಗಿ ನಡೆದುಕೊಳ್ಳಬೇಕು ಎನ್ನುವುದರ ಕುರಿತು ದೆಹಲಿಯ ಶಾಲೆಗಳಲ್ಲಿ ಶೀಘ್ರದಲ್ಲೇ ಬಾಲಕರು ಪ್ರತಿಜ್ಞೆ ತೆಗೆದುಕೊಳ್ಳಲಿದ್ದಾರೆ.

ಇಂತಹ ನಿಯಮವನ್ನು ಜಾರಿ ತರಲು ದೆಹಲಿ ಸರ್ಕಾರ ನಿರ್ಧರಿಸಿದೆ. ವಾಣಿಜ್ಯ ಮತ್ತು ಕೈಗಾರಿಕೆಗೆ ಮಹಾಒಕ್ಕೂಟ(ಫಿಕಿ)ಆಯೋಜಿಸಿದ್ದ ಮಹಿಳಾ ಸಮ್ಮೇಳನದಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ‘ಮಹಿಳೆಯರಿಗೆ ಅಗೌರವ ತೋರಿದರೆ ಮನೆಗೆ ಸೇರಿಸುವುದಿಲ್ಲ ಎಂದು ಕಟ್ಟುನಿಟ್ಟಾಗಿ ಎಲ್ಲ ಅಮ್ಮಂದಿರು ಹಾಗೂ ಅಕ್ಕಂದಿರು ಮಗನಿಗೆ ಅಥವಾ ತಮ್ಮನಿಗೆ ಹೇಳಬೇಕು. ಮಹಿಳೆಯರಿಗೆ ಗೌರವ ಸೂಚಿಸುವ ಪ್ರತಿಜ್ಞೆಯನ್ನು ಶಾಲೆಗಳಲ್ಲಿ ಬಾಲಕರು ಸ್ವೀಕರಿಸುವಂತೆ ಸೂಚಿಸಲಾಗುವುದು’ ಎಂದರು.

ಶೀಘ್ರದಲ್ಲೇ ನೇಣಿಗೆ ಹಾಕಲಿ: ‘ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಶೀಘ್ರದಲ್ಲೇ ನೇಣಿಗೆ ಏರಿಸಬೇಕು’ ಎಂದು ಕೇಜ್ರಿವಾಲ್‌ ಹೇಳಿದರು. ‘ಅಪರಾಧಿಗಳಿಗೆ ಶೀಘ್ರ ಶಿಕ್ಷೆ ವಿಧಿಸಬೇಕು ಎಂದು ಇಡೀ ದೇಶವೇ ಆಗ್ರಹಿಸುತ್ತಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.