ನಾಯಿ (ಸಾಂದರ್ಭಿಕ ಚಿತ್ರ)
Credit: iStock photo
ನೋಯ್ಡಾ: ತನ್ನ ಮಗುವಿಗೆ ಬೊಗಳಿದ ನಾಯಿಯನ್ನು ಕಾರಿಗೆ ಕಟ್ಟಿಕೊಂಡು ಸುಮಾರು 3 ಕಿ.ಮೀವರೆಗೆ ಎಳೆದೊಯ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾದ ನಯಿ ಬಸ್ತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಮಿತ್ ಬಂಧಿತ ಆರೋಪಿ.
ದೂರಿನ ಆಧಾರದಡಿ ಅಮಿತ್ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ನಾಯಿ ಹಾದುಹೋಗುವಾಗ ಅಮಿತ್‌ನ 10 ವರ್ಷದ ಮಗನು ಕಲ್ಲುಗಳಿಂದ ಹೊಡೆದಿದ್ದಾನೆ. ಇದಕ್ಕೆ ನಾಯಿ ಬೊಗಳಿದೆ. ಇದಕ್ಕೆ ಅಮಿತ್ ನಾಯಿಯನ್ನು ಕೋಲಿನಿಂದ ಹೊಡೆದು ಕಾರಿಗೆ ಕಟ್ಟಿ ಎಳೆದೊಯ್ದು ಕೌರ್ಯ ಎಸಗಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮತ್ತೊಂದಡೆ ತನ್ನ ಮಗನನ್ನು ನಾಯಿ ಕಚ್ಚಿದೆ ಎಂದು ಅಮಿತ್ ಹೇಳಿಕೊಂಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಅಮಿತ್‌ನನ್ನು ಬಂಧಿಸಲಾಗಿದ್ದು, ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.