ರಾಮಮಂದಿರಕ್ಕೆ ವಜ್ರಖಚಿತ ಕಿರೀಟ, ಚಿನ್ನದ ಬಿಲ್ಲು, ಬಾಣ ನೀಡಿದ ಉದ್ಯಮಿ
(ಚಿತ್ರ ಕೃಪೆ–X/@erbmjha)
ಅಯೋಧ್ಯೆ (ಉತ್ತರ ಪ್ರದೇಶ); ಗುಜರಾತ್‌ನ ವಜ್ರ ವ್ಯಾಪಾರಿಯೊಬ್ಬರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 11 ವಜ್ರಖಚಿತ ಕಿರೀಟಗಳು, ಚಿನ್ನದ ಬಿಲ್ಲು, ಬಾಣ ಸೇರಿದಂತೆ ಹಲವಾರು ಅಮೂಲ್ಯ ಆಭರಣಗಳನ್ನು ದೇಣಿಗೆ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತಿಳಿಸಿದೆ.
ಸೂರತ್ ಮೂಲದ ಮುಖೇಶ್ ಪಟೇಲ್ ಎಂಬುವವರು ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರು ಪ್ರಸಿದ್ಧ ಆಭರಣ ಸಂಸ್ಥೆ ಗ್ರೀನ್ ಲ್ಯಾಬ್‌ನ ಮಾಲೀಕರಾಗಿದ್ದಾರೆ.
ಉಡುಗೊರೆಯಲ್ಲಿ ವಜ್ರ, ಚಿನ್ನ , ಬೆಳ್ಳಿ ಮತ್ತು ಮಾಣಿಕ್ಯ(rubie)ಗಳಿಂದ ಮಾಡಿದ ಆಭರಣಗಳು ಸೇರಿವೆ ಎಂದು ವಿಎಚ್‌ಪಿಯ ರಾಷ್ಟ್ರೀಯ ಖಜಾಂಚಿ ದಿನೇಶ್ ನೆವಾಡಿಯಾ ಹೇಳಿದ್ದಾರೆ.
ಮುಖೇಶ್ ಪಟೇಲ್ ಅವರು, 11 ವಜ್ರಖಚಿತ ಕಿರೀಟಗಳು, 30 ಕೆ.ಜಿ. ಬೆಳ್ಳಿ , 300ಗ್ರಾಂ ಚಿನ್ನ ಮತ್ತು ಮಾಣಿಕ್ಯ(rubies)ಗಳನ್ನು ದೇಣಿಗೆ ನೀಡಿದ್ದಾರೆ. ಇವುಗಳ ಜತೆಗೆ, ಹಾರಗಳು, ಕಿವಿಯೋಲೆಗಳು, ಹಣೆಯ ತಿಲಕ, ರಾಮಾಯಣದ ನಾಲ್ವರು ಸಹೋದರರನ್ನು(ರಾಮ, ಲಕ್ಷ್ಮಣ, ಭರತ, ಶತ್ರುಘ್ನ)ಪ್ರತಿನಿಧಿಸುವ ನಾಲ್ಕು ದೊಡ್ಡ ಮತ್ತು ಮೂರು ಸಣ್ಣ ಬಿಲ್ಲುಗಳು, ನಾಲ್ಕು ಬತ್ತಳಿಕೆಗಳು, ಮೂರು ಗದೆಗಳು ಮತ್ತು ರೇಶ್ಮೆಯಿಂದ ಮಾಡಿದ ಬೀಸಣಿಕೆಯನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ವಸ್ತುಗಳನ್ನು ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಸಾಗಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.