ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾಣಿ ಅವರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ ಎಂದು ಯು.ಎನ್ ಮೆಹ್ತಾ ಆಸ್ಪತ್ರೆ ತಿಳಿಸಿದೆ.
‘ಭಾನುವಾರ ರೂಪಾಣಿ ಅವರ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗ ಕಳುಹಿಸಲಾಗಿತ್ತು. ಅವರಿಗೆ ಕೋವಿಡ್ ಸೋಂಕು ತಗುಲಿರುವುದು ತಿಳಿದುಬಂದಿದೆ’ ಎಂದು ಆಸ್ಪತ್ರೆ ಸೋಮವಾರ ಹೇಳಿದೆ.
ಭಾನುವಾರ ವಡೋದರಾದ ನಿಜಾಂಪುರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣಾ ರ‍್ಯಾಲಿಯನ್ನುದ್ಧೇಶಿಸಿ ಮಾತನಾಡುತ್ತಿರುವಾಗ ವಿಜಯ ರೂಪಾಣಿ ಅವರು ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣವೇ ಅಹಮದಾಬಾದ್‌ಗೆ ಕರೆದೊಯ್ದು,ಯು.ಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.