ADVERTISEMENT

Gujarat Results: ದಲಿತ ನಾಯಕ ಜಿಗ್ನೇಶ್‌ ಮೇವಾನಿಗೆ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2022, 15:01 IST
Last Updated 8 ಡಿಸೆಂಬರ್ 2022, 15:01 IST
ಶಾಸಕ ಜಿಗ್ನೇಶ್‌ ಮೇವಾನಿ
ಶಾಸಕ ಜಿಗ್ನೇಶ್‌ ಮೇವಾನಿ   

ಅಹಮದಾಬಾದ್‌:ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದಲಿತ ನಾಯಕ ಜಿಗ್ನೇಶ್‌ ಮೇವಾನಿ ಅವರು ವಡಗಾವ್‌ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಮೇವಾನಿ93,848 ಮತ ಗಳಿಸಿಕೊಂಡಿದ್ದಾರೆ. ಅವರ ಸಮೀಪದ ಸ್ಪರ್ಧಿಎಂ.ಜೆ. ವಘೇಲಾ89,052 ಪಡೆದು ಅಲ್ಪ ಅಂತರದಿಂದ ಸೋಲು ಕಂಡಿದ್ದಾರೆ.

ಈ ಗೆಲುವು ನನ್ನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ ಎಂದುಮೇವಾನಿ ಟ್ವೀಟ್ ಮಾಡಿದ್ದಾರೆ.

ADVERTISEMENT

'ನನ್ನ ಪರವಾಗಿ ಜನಾದೇಶ ನೀಡಿದ್ದಕ್ಕಾಗಿ ವಡಗಾವ್‌ಜನರಿಗೆ ಧನ್ಯವಾದ ಹೇಳುತ್ತೇನೆ. ಈ ಗೆಲುವು ಮತದಾರರು ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ತೋರಿಸುತ್ತದೆ. ಇದು ಸಮಾಜದ ಬಡ ಮತ್ತು ಕೆಳ ವರ್ಗದ ಜನರ ಬಗೆಗಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ' ಎಂದು ತಿಳಿಸಿದ್ದಾರೆ.

ಕಳೆದ (2017ರ) ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮೇವಾನಿ ಅವರಿಗೆಕಾಂಗ್ರೆಸ್‌ ಬೆಂಬಲ ನೀಡಿತ್ತು. ಅವರನ್ನು ಬೆಂಬಲಿಸುವ ಸಲುವಾಗಿ ಈ ಕ್ಷೇತ್ರದಿಂದಸ್ಪರ್ಧಿಸಿರಲಿಲ್ಲ.

ವಡಗಾವ್‌ ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದು, ಮುಸ್ಲಿಂ ಮತದಾರರು ಫಲಿತಾಂಶದ ನಿರ್ಣಯದಲ್ಲಿಪ್ರಧಾನ ಪಾತ್ರ ವಹಿಸುತ್ತಾರೆ. ಇಲ್ಲಿ ಒಟ್ಟು 2.94 ಲಕ್ಷ ಮತದಾರರಿದ್ದು, ಈ ಪೈಕಿ ಮುಸ್ಲಿಂ ಮತದಾರರ ಸಂಖ್ಯೆ 90 ಸಾವಿರದಷ್ಟಿದೆ.

ಸದ್ಯ ಗುಜರಾತ್‌ ವಿಧಾನಸಭೆಯ ಎಲ್ಲ ಕ್ಷೇತ್ರಗಳ ಮತ ಎಣಿಕೆ ಮುಕ್ತಾಯವಾಗಿದೆ. 182 ಕ್ಷೇತ್ರಗಳ ಪೈಕಿ ಬಿಜೆಪಿ 156ರಲ್ಲಿ, ಕಾಂಗ್ರೆಸ್‌ 17 ಕಡೆ ಹಾಗೂ ಎಎಪಿ 5 ಸ್ಥಾನಗಳಲ್ಲಿ ಜಯ ಸಾಧಿಸಿವೆ. ಉಳಿದಂತೆ 4 ಕ್ಷೇತ್ರಗಳು ಇತರರ ಪಾಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.