ADVERTISEMENT

‘ಸಲ್ಮಾನ್‌ಗೆ ಕೊಲೆ ಬೆದರಿಕೆ ಗುಜರಾತ್‌ನಲ್ಲಿ ಆರೋಪಿ ಪತ್ತೆ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 16:36 IST
Last Updated 15 ಏಪ್ರಿಲ್ 2025, 16:36 IST
ಸಲ್ಮಾನ್ ಖಾನ್
ಸಲ್ಮಾನ್ ಖಾನ್   

ವಡೋದರಾ/ ಮುಂಬೈ (ಪಿಟಿಐ): ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಎನ್ನಲಾದ ವ್ಯಕ್ತಿಯನ್ನು ಗುಜರಾತ್‌ನ ವಡೋದರಾ ಜಿಲ್ಲೆಯ ಗ್ರಾಮವೊಂದರಲ್ಲಿ ಪತ್ತೆಹಚ್ಚಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. 

ಸಲ್ಮಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿಯನ್ನು 26 ವರ್ಷದ ಮಯಾಂಕ್ ಪಾಂಡ್ಯ ಎಂದು ಗುರುತಿಸಲಾಗಿದ್ದು, ಆತ ಮಾನಸಿಕ ಅಸ್ವಸ್ತನಾಗಿದ್ದಾನೆ. ಹೀಗಾಗಿ, ಆತನನ್ನು ಬಂಧಿಸದೆ, ಅಗತ್ಯವಿದ್ದಾಗ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. 

ಸಲ್ಮಾನ್ ಖಾನ್ ಅವರ ಕಾರನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಮತ್ತು ವೈ ಪ್ಲಸ್ ಭದ್ರತೆ ಹೊಂದಿರುವ ಅವರನ್ನು ಮನೆಗೆ ನುಗ್ಗಿ ಥಳಿಸುತ್ತೇವೆ ಎಂಬ ಬೆದರಿಕೆಯ ಸಂದೇಶವು ಭಾನುವಾರ ಮುಂಬೈ ಸಂಚಾರಿ ಪೊಲೀಸರ ವಾಟ್ಸ್ಆ್ಯಪ್ ಸಹಾಯವಾಣಿಗೆ ಬಂದಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.