ADVERTISEMENT

Gujarat Results: ಡಬಲ್ ಎಂಜಿನ್ ಅಭಿವೃದ್ಧಿ ಅಜೆಂಡಾಗೆ ಗೆಲುವು: ಬಿಜೆಪಿ

ಪಿಟಿಐ
Published 8 ಡಿಸೆಂಬರ್ 2022, 6:10 IST
Last Updated 8 ಡಿಸೆಂಬರ್ 2022, 6:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್: ಗುಜರಾತ್‌ ವಿಭಾನಸಭೆ ಚುನಾವಣೆಯಲ್ಲಿ ಸತತ ಏಳನೇ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವೆನಿಸಿದೆ.

ಮತ ಎಣಿಕೆ ನಡೆಯುತ್ತಿದ್ದು ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 182 ಸದಸ್ಯ ಬಲದ ಗುಜರಾತ್‌ನಲ್ಲಿ ಬಿಜೆಪಿ 150ರಷ್ಟು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಚುನಾವಣೆಯಲ್ಲಿ ಬಿಜೆಪಿಯ ಅಭಿವೃದ್ಧಿಯ ಅಜೆಂಡಾಗೆ ಗೆಲುವಾಗಿದ್ದು, ಕಾಂಗ್ರೆಸ್‌ನ ನಕಾರಾತ್ಮಕ ರಾಜಕೀಯಕ್ಕೆ ಸೋಲಾಗಿದೆ ಎಂದು ಬಿಜೆಪಿ ಹೇಳಿದೆ.

ADVERTISEMENT

ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು, ವಿಜಯೋತ್ಸವ ಆಚರಿಸುತ್ತಿದ್ದಾರೆ. ಗಾಂಧಿನಗರದಲ್ಲಿರುವ ಪಕ್ಷದ ಕಚೇರಿ ಮುಂಭಾಗದಲ್ಲಿ ಒಂದುಗೂಡಿರುವ ಬೆಂಬಲಿರುವ ಬಿಜೆಪಿಗೆ ಜಯಘೋಷ ಕೂಗಿದರು.

ಇದು ರಾಜ್ಯದಲ್ಲಿ ಪಕ್ಷ ನಡೆಸಿದ ಡಬಲ್ ಎಂಜಿನ್ ಅಭಿವೃದ್ಧಿ ಅಜೆಂಡಾದ ಗೆಲುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ವಕ್ತಾರ ಯಮಲ್ ವ್ಯಾಸ್ ಹೇಳಿದ್ದಾರೆ.

ಕಾಂಗ್ರೆಸ್‌ನ ನಕಾರಾತ್ಮಕ ರಾಜಕೀಯಕ್ಕೆ ಹಿನ್ನಡೆಯಾಗಿದ್ದು, ಇದರಿಂದ ಪಾಠ ಕಲಿಯಬೇಕು. ಕಾಂಗ್ರೆಸ್ ಪಕ್ಷವನ್ನು ಜನಸಾಮಾನ್ಯರು ಅಳಿಸಿ ಹಾಕಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.