
ನವದೆಹಲಿ (ಪಿಟಿಐ): ಎಚ್–1ಬಿ ವೀಸಾಕ್ಕೆ ಸಂಬಂಧಿಸಿದಂತೆ ಪೂರ್ವ ನಿಗದಿತ ಸಂದರ್ಶನಗಳನ್ನು ಅಮೆರಿಕ ರದ್ದುಪಡಿಸಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
ಡಿಸೆಂಬರ್ 15ರಿಂದ ಎಚ್–1ಬಿ ವೀಸಾ ಅರ್ಜಿದಾರರ ಸಂದರ್ಶನ ನಿಗದಿಯಾಗಿತ್ತು. ಆದರೆ, ಸಂದರ್ಶನ ರದ್ದುಪಡಿಸಿರುವುದಾಗಿ ಅಮೆರಿಕದ ವಲಸೆ ಅಧಿಕಾರಿಗಳು, ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ. ಸಂದರ್ಶನ ರದ್ದಾಗಿರುವುದು ಭಾರಿ ಸಂಖ್ಯೆಯ ಭಾರತೀಯ ಅರ್ಜಿದಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸಂದರ್ಶವನ್ನು ಮುಂದಿನ ವರ್ಷದ ಮೇ ತಿಂಗಳಿಗೆ ಮುಂದೂಡಲಾಗಿದೆ ಎಂಬ ಇಮೇಲ್ ಸಂದೇಶ ಕೆಲವು ಅರ್ಜಿದಾರರಿಗೆ ಬಂದಿವೆ.
‘ಭಾರತೀಯ ಅಭ್ಯರ್ಥಿಗಳಿಗೆ ಆಗಿರುವ ಸಮಸ್ಯೆಯನ್ನು ಇತ್ಯರ್ಥಪಡಿಸಲು ಅಮೆರಿಕದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.