ADVERTISEMENT

ಬುಲೆಟ್ ರೈಲು ಸುರಕ್ಷತೆ ಪರೀಕ್ಷೆಗಾಗಿ ಹಳಿಗಳ ಬದಿಗೆ ಕೂರುವ ಸಿಬ್ಬಂದಿ!

ಏಜೆನ್ಸೀಸ್
Published 27 ಆಗಸ್ಟ್ 2018, 18:53 IST
Last Updated 27 ಆಗಸ್ಟ್ 2018, 18:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ : ಗಂಟೆಗೆ 300 ಕಿ.ಮೀ ವೇಗದಲ್ಲಿ ಸಂಚರಿಸುವ ಜಪಾನ್‌ನ ಶಿಂಕಾನ್‌ಸೆನ್‌ ಬುಲೆಟ್ ರೈಲು ಸುರಂಗ ಮಾರ್ಗಗಳಲ್ಲಿ ಚಲಿಸುವ ವೇಳೆ, ಹಳಿಗಳ ಎರಡೂ ಬದಿಗೆ ಜನ ಕುಳಿತಿರುತ್ತಾರೆ.

ಅರೆ ಇದೇನಿದು, ರೈಲಿನ ಒಳಗೆ ಕೂರುವ ಬದಲು ಹಳಿಗಳ ಬದಿಗೆ ಕೂರುವ ಇವರು ಯಾರು ಎಂದು ಆಶ್ಚರ್ಯವೇ? ಇವರೆಲ್ಲ ರೈಲಿನ ಸುರಕ್ಷತೆ ನಿರ್ವಹಿಸುವ ಕಂಪನಿಯ ಸಿಬ್ಬಂದಿ.

ಕಂಪನಿ ನಡೆಸುವ ಸುರಕ್ಷತಾ ಪರೀಕ್ಷೆಯ ಭಾಗವಾಗಿ ಸಿಬ್ಬಂದಿ, ಸುರಂಗ ಮಾರ್ಗಗಳಲ್ಲಿ ಹಳಿಗಳ ಬದಿಗೆ ಕೂರುವುದು ಕಡ್ಡಾಯ. ಈ ರೀತಿ ಪರೀಕ್ಷೆ ನಡೆಸುವ ಕುರಿತು ಕೆಲವು ಸಿಬ್ಬಂದಿ ದೂರು ಸಲ್ಲಿಸಿದ್ದಾರೆ. ಆದರೂ, ಪರೀಕ್ಷೆಯ ವಿಧಾನ ಬದಲಿಸುವ ಯಾವುದೇ ಯೋಚನೆ ಇಲ್ಲ ಎಂದು ಜಪಾನ್ ರೈಲ್ವೆಯ ಪಶ್ಚಿಮ ವಿಭಾಗ ತಿಳಿಸಿದೆ.

ADVERTISEMENT

ಪರೀಕ್ಷೆಗೆ ತರಬೇತಿ:‘2015ರಲ್ಲಿ ಸಂಭವಿಸಿದ ಅಪಘಾತದಲ್ಲಿಬುಲೆಟ್ ರೈಲಿನ ಹೊರಭಾಗವೊಂದು ಕಳಚಿ ಬಿದ್ದಿತ್ತು. ಇದಾದ ನಂತರ 2016ರಲ್ಲಿ ಕಂಪನಿ ಈ ಪರೀಕ್ಷಾ ವಿಧಾನವನ್ನು ಆರಂಭಿಸಿತು. ರೈಲು ಎಷ್ಟು ವೇಗವಾಗಿ ಸಂಚರಿಸುತ್ತದೆ ಮತ್ತು ಸಿಬ್ಬಂದಿ ತಮ್ಮ ಕರ್ತವ್ಯವನ್ನು ಹೇಗೆ ಗಂಭೀರವಾಗಿ ನಿರ್ವಹಿಸಬೇಕು ಎನ್ನುವುದನ್ನು ತಿಳಿಸುವುದು ಈ ಪರೀಕ್ಷೆಯ ಉದ್ದೇಶ. ಪರೀಕ್ಷೆಯಲ್ಲಿ ಭಾಗಿಯಾಗಲು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ’ ಎಂದುಕಂಪನಿ ವಕ್ತಾರ ಹೇಳಿದ್ದಾರೆ.

ಪರೀಕ್ಷಾ ವಿಧಾನದ ಕುರಿತುಕೆಲವು ಸಿಬ್ಬಂದಿ ದೂರು ನೀಡಿರುವುದನ್ನು ಒಪ್ಪಿಕೊಳ್ಳುವ ವಕ್ತಾರ, ‘ತರಬೇತಿ ನೀಡುವ ವೇಳೆ ಸುರಕ್ಷತೆಗೆ ಹೆಚ್ಚು ಗಮನ ನೀಡುತ್ತೇವೆ’ ಎಂದೂ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.