
ಇಸ್ರೇಲ್ ಪಡೆಗಳು ಹತ್ಯೆಗೈದಿದ್ದ ಪುತ್ರನ ಮೃತದೇಹದ ಎದುರು ತಾಯಿ ಕಣ್ಣೀರು ಹಾಕಿದರು
ಎಎಫ್‌ಪಿ ಚಿತ್ರ
ಜರುಸಲೇಂ: ಹಮಾಸ್ ಬಂಡುಕೋರರು 2023ರ ಅಕ್ಟೋಬರ್ 7ರಂದು ನಡೆಸಿದ ಹಠಾತ್ ದಾಳಿಯಲ್ಲಿ ಹತ್ಯೆಗೈದಿದ್ದ ಮೂವರು ಸೈನಿಕರ ಮೃತದೇಹವನ್ನು ಭಾನುವಾರ ರಾತ್ರಿ ಹಸ್ತಾಂತರಿಸಿದರು ಎಂದು ಇಸ್ರೇಲ್ ತಿಳಿಸಿದೆ.
ದಾಳಿ ಸಂದರ್ಭದಲ್ಲಿ ದಕ್ಷಿಣ ಇಸ್ರೇಲ್‌ನಲ್ಲಿ ಸೈನಿಕರನ್ನು ಹತ್ಯೆ ಮಾಡಿ ಮೃತದೇಹಗಳನ್ನು ಗಾಜಾಕ್ಕೆ ಕೊಂಡೊಯ್ದಿದ್ದರು. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ಮೃತರನ್ನು ಗುರುತಿಸಿದೆ ಎಂದು ಇಸ್ರೇಲ್ ಸೇನೆಯು ತಿಳಿಸಿದೆ.
ದಕ್ಷಿಣ ಗಾಜಾದ ಸುರಂಗದಲ್ಲಿ ಇವರ ಮೃತದೇಹಗಳು ಪತ್ತೆಯಾಗಿವೆ ಎಂದು ಹಮಾಸ್ ಇದಕ್ಕೂ ಮುನ್ನ ಹೇಳಿಕೆಯಲ್ಲಿ ತಿಳಿಸಿತ್ತು.
ಅಕ್ಟೋಬರ್ 10ರಂದು ಕದಮ ವಿರಾಮ ಒಪ್ಪಂದ ಏರ್ಪಟ್ಟ ಬಳಿಕ ಹಮಾಸ್ ಬಂಡುಕೋರರು 20 ಒತ್ತೆಯಾಳುಗಳ ಮೃತದೇಹಗಳನ್ನು ಹಸ್ತಾಂತರಿಸಿದ್ದಾರೆ. ಈ ಪೈಕಿ ಎಂಟು ಮೃತದೇಹಗಳು ಗಾಜಾದಲ್ಲಿಯೇ ಇವೆ.
45 ಮೃತದೇಹಗಳ ಹಸ್ತಾಂತರ: ಇಸ್ರೇಲ್ 45 ಪ್ಯಾಲೆಸ್ಟೀನ್ ಪ್ರಜೆಗಳ ಮೃತದೇಹಗಳನ್ನು ಹಸ್ತಾಂತರಿಸಿದೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.