
ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ‘ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ಮತಗಳವು ಪ್ರಕರಣಗಳು ನಡೆದಿದ್ದು, ಕಾಂಗ್ರೆಸ್‌ನದ್ದಾಗಬೇಕಿದ್ದ ಗೆಲುವು ಬಿಜೆಪಿಯದ್ದಾಗಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿರುವ ಅವರು ಈ ಆರೋಪ ಮಾಡಿದ್ದಾರೆ.
ಹರಿಯಾಣದಲ್ಲಿ 25 ಲಕ್ಷ ಮತಗಳು ಕಳ್ಳತನವಾಗಿವೆ. ಇದರಲ್ಲಿ 5.21 ಲಕ್ಷ ನಕಲಿ ಮತದಾರರು, 93,174 ಅನರ್ಹ ಮತದಾರರು ಹಾಗೂ 19.26 ಲಕ್ಷ ಬಲ್ಕ್ ಮತದಾರರು ಇದ್ದರು ಎಂದು ದೂರಿದ್ದಾರೆ.
‘ಜೆನ್ ಝೀ ತಲೆಮಾರಿನವರ ಭವಿಷ್ಯವನ್ನೇ ಧ್ವಂಸಗೊಳಿಸಲಾಗಿದೆ’ ಎಂದಿರುವ ರಾಹುಲ್ ಗಾಂಧಿ, ಚುನಾವಣಾ ಆಯೋಗ ಮತ್ತು ದೇಶದಲ್ಲಿರುವ ಸದ್ಯದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.
ನಕಲಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲು ತಂತ್ರಾಂಶ ಇದೆ ಎಂದಾದರೆ, ಆ ಕೆಲಸವನ್ನು ಚುನಾವಣಾ ಆಯೋಗ ಏಕೆ ಮಾಡುತ್ತಿಲ್ಲ ಎಂದೂ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.