ADVERTISEMENT

ಹರಿಯಾಣದಲ್ಲಿ 'ಆಪರೇಷನ್ ಟ್ರ್ಯಾಕ್‌ಡೌನ್':  ಒಂದೇ ದಿನ 257 ಆರೋಪಿಗಳ ಬಂಧನ

ಪಿಟಿಐ
Published 16 ನವೆಂಬರ್ 2025, 10:13 IST
Last Updated 16 ನವೆಂಬರ್ 2025, 10:13 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಚಂಡೀಗಢ: ಹರಿಯಾಣ ಪೊಲೀಸರು 'ಆಪರೇಷನ್ ಟ್ರ್ಯಾಕ್‌ಡೌನ್' ಹೆಸರಿನಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿರುವವರನ್ನು ಬಂಧಿಸುವ ದೊಡ್ಡ ಕಾರ್ಯಾಚರಣೆ ನಡೆಸುತ್ತಿದ್ದು ಶುಕ್ರವಾರ ಒಂದೇ ದಿನ 257 ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ರಾಜ್ಯವನ್ನು ಇನ್ನಷ್ಟು ಸುರಕ್ಷಿತವಾಗಿಡಲು ಹರಿಯಾಣ ಪೊಲೀಸರು ಕಳೆದ ವಾರದಿಂದ 'ಆಪರೇಷನ್ ಟ್ರ್ಯಾಕ್‌ಡೌನ್‘ ಹೆಸರಿನಲ್ಲಿ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾಜ್ಯದ ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

ಕೊಲೆ ಯತ್ನ, ಹತ್ಯೆ, ವಸೂಲಿ ಮತ್ತು ಅಕ್ರಮ ಆಯುಧ ಸಂಗ್ರಹ, ಡಗ್ಸ್‌ ಮಾಫಿಯಾ, ಅತ್ಯಾಚಾರ ಯತ್ನ ಸೇರಿದಂತೆ ವಿವಿಧ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಲಾಗುತ್ತಿದ್ದು, ಇಂತಹವರಿಗೆ ಜಾಮೀನು ನೀಡಲಾಗುವುದಿಲ್ಲ ಎಂದು ಹರಿಯಾಣ ಡಿಜಿಪಿ ಓ.ಪಿ.ಸಿಂಗ್ ಹೇಳಿದ್ದಾರೆ. 

42 ಗಂಭೀರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 62 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಒಂಬತ್ತು ಕೊಲೆ ಪ್ರಕರಣಗಳಲ್ಲಿ 23 ಜನ ಹಾಗೂ 13 ಕೊಲೆ ಯತ್ನ ಪ್ರಕರಣಗಳಲ್ಲಿ 16 ಜನರನ್ನು ಬಂಧಿಸಲಾಗಿದೆ.

 ನವೆಂಬರ್ 5ರಿಂದ ಆರಂಭವಾಗಿರುವ ರಾಜ್ಯವ್ಯಾಪಿ 'ಆಪರೇಷನ್ ಟ್ರ್ಯಾಕ್ ಡೌನ್' ಕಾರ್ಯಾಚರಣೆಯಲ್ಲಿ ಸಂಘಟಿತ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಲಾಗುತ್ತಿದ್ದೆ. ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪರಾಧಿಗಳ ಮೇಲೆ ನಿಗಾವಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇಲ್ಲಿಯವರೆಗೂ ಸುಮಾರು 500ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಲಾಗಿದೆ ಎಂದು ಡಿಜಿಪಿ ಓ.ಪಿ.ಸಿಂಗ್ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.