ADVERTISEMENT

ರೈತರನ್ನು ಚದುರಿಸಲು ಅಶ್ರುವಾಯು ಪ್ರಯೋಗ

ಪಿಟಿಐ
Published 3 ಜನವರಿ 2021, 20:05 IST
Last Updated 3 ಜನವರಿ 2021, 20:05 IST
ಅಶ್ರುವಾಯು ಪ್ರಯೋಗ
ಅಶ್ರುವಾಯು ಪ್ರಯೋಗ   

ಚಂಡೀಗಡ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನವದೆಹಲಿಯತ್ತ ಜಾಥಾ ಕೈಗೊಂಡಿದ್ದ ರೈತರ ಗುಂಪನ್ನು ಚದುರಿಸಲು ಹರಿಯಾಣ ಪೊಲೀಸರು ಭಾನುವಾರ ಅಶ್ರುವಾಯು ಪ್ರಯೋಗಿಸಿದ್ದಾರೆ.

‘ಭುದ್ಲಾ ಸಂಗ್ವಾರಿ ಗ್ರಾಮದ ಬಳಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದ ಪ್ರತಿಭಟನಕಾರರು, ಮಸಾನಿ ಅಣೆಕಟ್ಟೆಯ ಸಮೀಪ ಹಾಕಿದ್ದ ಬ್ಯಾರಿಕೇಡ್‌ಗಳನ್ನೂ ಮುರಿಯಲು ಮುಂದಾದರು. ಈ ವೇಳೆ ಅಶ್ರುವಾಯು ಪ್ರಯೋಗಿಸಿ ಅವರನ್ನು ಚದುರಿಸಲಾಯಿತು’ ಎಂದು ರೆವಾರಿ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಜೋರ್ವಾಲ್‌ ಹೇಳಿದ್ದಾರೆ.

ಡಿಸೆಂಬರ್‌ 31ರಂದು ರಾಜಸ್ಥಾನದ ಶಹಜಹಾನ್‌ಪುರದಲ್ಲೂ ಪ್ರತಿಭಟನಕಾರರು ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿಯತ್ತ ಸಾಗಿದ್ದರು. ಆಗಲೂ ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ರಾಜಸ್ಥಾನ, ಹರಿಯಾಣದ ರೈತರು ಕೆಲ ದಿನಗಳಿಂದ ಜೈಪುರ–ದೆಹಲಿ ಹೆದ್ದಾರಿಯ ಸನಿಹ ಪ್ರತಿಭಟನೆ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.