ADVERTISEMENT

ಮುಸ್ಲಿಮರ ಮೇಲಿನ ದ್ವೇಷ ಭಾರತದಲ್ಲಿ ಸಾಮಾನ್ಯವಾಗಿಬಿಟ್ಟಿದೆ: ಒಮರ್‌ ಅಬ್ದುಲ್ಲಾ

ಹಿಜಾಬ್‌ ಸಂಘರ್ಷ: ಬಹುತ್ವ ಭಾರತ ಬಹುಕಾಲ ಉಳಿಯುವುದಿಲ್ಲ–ಒಮರ್‌ ಅಬ್ದುಲ್ಲಾ

ಪಿಟಿಐ
Published 8 ಫೆಬ್ರುವರಿ 2022, 12:38 IST
Last Updated 8 ಫೆಬ್ರುವರಿ 2022, 12:38 IST
ಒಮರ್‌ ಅಬ್ದುಲ್ಲಾ
ಒಮರ್‌ ಅಬ್ದುಲ್ಲಾ   

ಶ್ರೀನಗರ: ಮುಸ್ಲಿಮರ ಮೇಲಿನ ದ್ವೇಷ ಭಾರತದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಹೀಗೆಯೇ ಮುಂದುವರಿದರೆ ದೇಶದ ವೈವಿಧ್ಯತೆ ಬಹುಕಾಲ ಉಳಿಯುವುದಿಲ್ಲ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ ಮಂಗಳವಾರ ಹೇಳಿದ್ದಾರೆ.

ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾಲೇಜುಗಳಲ್ಲಿ ಹಿಜಾಬ್‌ ಕುರಿತ ವಿವಾದ ತಾರಕಕ್ಕೇರಿದ್ದು ಪ್ರತಿಭಟನೆಗಳು ನಡೆಯುತ್ತಿವೆ.

ಕರ್ನಾಟಕದ ಕಾಲೇಜೊಂದರಲ್ಲಿ ಹಿಜಾಬ್‌ ಧರಿಸಿದ ಮಹಿಳೆಯು ಘೋಷಣೆ ಕೂಗುತ್ತಾ ಪ್ರತಿಭಟಿಸುತ್ತಿದ್ದರೆ ಅದಕ್ಕೆ ಪ್ರತಿಯಾಗಿ ಕೆಲವು ಪುರುಷರು ಕೇಸರಿ ಶಾಲುಗಳನ್ನು ಧರಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದನ್ನು ಉಲ್ಲೇಖಿಸಿ ಒಮರ್‌ ಈ ಹೇಳಿಕೆ ನೀಡಿದ್ದಾರೆ.

ADVERTISEMENT

‘ಭಾರತದಲ್ಲಿ ಇಂದು ಮುಸ್ಲಿಮರ ಮೇಲಿನ ದ್ವೇಷ ಸಾಮಾನ್ಯವಾಗಿದ್ದು ಸಂಪೂರ್ಣವಾಗಿ ಮುಖ್ಯ ವಾಹಿನಿಗೆ ತರಲಾಗಿದೆ.ನಾವು ವೈವಿಧ್ಯತೆಯ ರಾಷ್ಟ್ರವಾಗಿ ಬಹುಕಾಲ ಉಳಿಯುವುದಿಲ್ಲ. ಅದಕ್ಕಾಗಿ ನಾವು ಅನ್ಯ ಜನರನ್ನು ಶಿಕ್ಷಿಸುತ್ತಿದ್ದೇವೆ ಮತ್ತು ದೇಶದಿಂದ ಹೊರಗಿಡಲು ಯತ್ನಿಸುತ್ತಿದ್ದೇವೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.