ADVERTISEMENT

ಕುಮಾರಸ್ವಾಮಿ ವಚನಭ್ರಷ್ಟತೆ ಪಿತಾಮಹ ಎಂದ ರಾಜಣ್ಣ: ಕಾಂಗ್ರೆಸ್‌ನತ್ತ ಶ್ರೀನಿವಾಸ್‌?

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 20:34 IST
Last Updated 20 ಡಿಸೆಂಬರ್ 2020, 20:34 IST
ಎಸ್‌.ಆರ್‌.ಶ್ರೀನಿವಾಸ್‌
ಎಸ್‌.ಆರ್‌.ಶ್ರೀನಿವಾಸ್‌   

ತುಮಕೂರು: ಗುಬ್ಬಿ ಜೆಡಿಎಸ್‌ ಶಾಸಕ ಎಸ್‌.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದವು ಎಂದು ಶನಿವಾರ ಹೇಳಿದ್ದ ಅವರು, ಭಾನುವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್‌.ರಾಜಣ್ಣ ಅವರ ಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಜರಾಗಿದ್ದರು.

ಕೆ.ಎನ್‌.ರಾಜಣ್ಣ, ‘ವಚನಭ್ರಷ್ಟತೆ, ಒಳಸಂಚಿನ ಪಿತಾಮಹ ಕುಮಾರಸ್ವಾಮಿ. ಅವರಿಂದಲೇ ಬಾಂಡ್ ಪೇಪರ್ ಸಂಸ್ಕೃತಿ ಶುರುವಾಯಿತು. ಅವರಿಗೆ ಯಾವುದೇ ತತ್ವ ಸಿದ್ಧಾಂತಗಳೂ ಇಲ್ಲ’ಎಂದರು.

ಶ್ರೀನಿವಾಸ್ ಮಾತನಾಡಿ, ‘ಲೋಕಸಭಾ ಚುನಾವಣೆಯಲ್ಲಿ ಎಚ್‌.ಡಿ. ದೇವೇಗೌಡರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಕೆಲವರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಂಡರು. ಅವರನ್ನು ನಂಬಿದ್ದಕ್ಕೆ ತಕ್ಕ ಪ್ರತಿಫಲ ಅನುಭವಿಸಿದರು’ ಎಂದರು.

ADVERTISEMENT

***

ಅಧಿಕಾರದ ಆಸೆ ಇದ್ದವರು ಮಾತ್ರ ಬಿಜೆಪಿಗೆ ಹೋಗುವರು. ನನಗೆ ಅಧಿಕಾರದ ಆಸೆ ಇಲ್ಲ. ಬಿಜೆಪಿ ಬಗ್ಗೆ ಒಲವೂ ಇಲ್ಲ. ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಹೋದರೆ ನಾನು ಜೆಡಿಎಸ್ ತೊರೆಯುವುದು ಶತಸಿದ್ಧ. ನಾನು ಈಗ ಜೆಡಿಎಸ್‌ನಲ್ಲಿಯೇ ಇದ್ದೇನೆ. ಮುಂದಿನ ಚುನಾವಣೆ ವೇಳೆಗೆ ಎಲ್ಲಿ ಇರುತ್ತೇನೊ ಗೊತ್ತಿಲ್ಲ.
-ಎಸ್‌.ಆರ್.ಶ್ರೀನಿವಾಸ್, ಜೆಡಿಎಸ್‌ ಶಾಸಕ, ಗುಬ್ಬಿ ವಿಧಾನಸಭಾ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.