ADVERTISEMENT

ಅಯೋಧ್ಯೆ ಪ್ರಕರಣ ನಿತ್ಯ ವಿಚಾರಣೆ 'ಅಮಾನವೀಯ' ಎಂದ ನ್ಯಾಯವಾದಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 7:43 IST
Last Updated 9 ಆಗಸ್ಟ್ 2019, 7:43 IST
   

ನವದೆಹಲಿ: ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ನಿತ್ಯ ವಿಚಾರಣೆಯನ್ನು ವಿರೋಧಿಸಿದಹಿರಿಯ ನ್ಯಾಯವಾದಿ ಇದು ಅಮಾನವೀಯ, ಈ ರೀತಿ ತ್ವರಿತ ಗತಿಯಲ್ಲಿ ವಿಚಾರಣೆ ನಡೆಯಬಾರದು ಎಂದಿದ್ದಾರೆ.

ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದ ನಾಲ್ಕನೇ ದಿನದ ವಿಚಾರಣೆ ಶುಕ್ರವಾರ ನಡೆದಿದೆ.

ಪ್ರಕರಣದಲ್ಲಿ ಮುಸ್ಲಿಂ ಕಕ್ಷಿದಾರರ ಪರ ವಾದಿಸುತ್ತಿರುವ ನ್ಯಾಯವಾದಿ ರಾಜೀವ್ ಧವನ್,ವಾರದಲ್ಲಿ 5 ದಿನ ವಿಚಾರಣೆ ನಡೆದರೆ ಅದು ಅಮಾನವೀಯ.ನಮಗೆ ನ್ಯಾಯಾಲಯಕ್ಕೆ ಸಹಕರಿಸಲು ಸಾಧ್ಯವಾಗುವುದಿಲ್ಲ. ವಿಚಾರಣೆ ತ್ವರಿತಗತಿಯಲ್ಲಿ ಇರಬಾರದಿತ್ತು.ಇದು ನಾವು ಪ್ರಕರಣದಿಂದ ಹಿಂದೆ ಸರಿಯುವಂತೆ ಒತ್ತಡ ಹೇರುತ್ತದೆ ಎಂದಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ, ನಿಮ್ಮ ಮನವಿಯನ್ನು ಆಲಿಸಿದ್ದೇವೆ.ಈ ಬಗ್ಗೆ ಶೀಘ್ರದಲ್ಲಿಯೇ ನಿಮಗೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸುವ ಪ್ರಯತ್ನ ವಿಫಲವಾದ ಕಾರಣ ಆಗಸ್ಟ್ 6ರಿಂದ ಸುಪ್ರೀಂ ಕೋರ್ಟ್‌ನಲ್ಲಿ ನಿತ್ಯವೂ ಪ್ರಕರಣದ ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.