ADVERTISEMENT

ಉತ್ತರಾಖಂಡ: ಭಾರಿ ಮಳೆಗೆ 12 ಮಂದಿ ಸಾವು

ಪಿಟಿಐ
Published 1 ಆಗಸ್ಟ್ 2024, 11:21 IST
Last Updated 1 ಆಗಸ್ಟ್ 2024, 11:21 IST
<div class="paragraphs"><p>ಉತ್ತರಾಖಂಡದಲ್ಲಿ ಭಾರಿ ಮಳೆ</p></div>

ಉತ್ತರಾಖಂಡದಲ್ಲಿ ಭಾರಿ ಮಳೆ

   

ಪಿಟಿಐ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಒಂದೇ ಕುಟುಂಬದ ಮೂವರು ಸೇರಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರಾತ್ರಿಯಿಡಿ ಸುರಿದ ಮಳೆಗೆ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮಳೆಯ ರಭಸಕ್ಕೆ ಮನೆಗಳು ಕುಸಿದು ಬಿದ್ದಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಪ್ರದೇಶಗಳಲ್ಲಿ ಇಂದು (ಗುರುವಾರ) ಮಧ್ಯಾಹ್ನವೂ ಮಳೆ ಮುಂದುವರಿದಿದೆ.

ಹರಿದ್ವಾರ ಜಿಲ್ಲೆಯಲ್ಲಿ 6 ಮಂದಿ, ತೆಹ್ರಿ ಜಿಲ್ಲೆಯಲ್ಲಿ 3, ಡೆಹ್ರಾಡೂನ್‌ನಲ್ಲಿ 2 ಮತ್ತು ಚಮೋಲಿಯಲ್ಲಿ ಒಬ್ಬರು ಮೃತಟ್ಟಿದ್ದಾರೆ ಎಂದು ವರದಿಯಾಗಿದೆ. ಮಳೆ ಅವಘಡದಲ್ಲಿ ಆರು ಮಂದಿ ಗಾಯಗೊಂಡಿದ್ದು, ಹಲ್ದ್ವಾನಿ ಮತ್ತು ಚಮೋಲಿ ಜಿಲ್ಲೆಯಲ್ಲಿ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿಯಂತ್ರಣ ಕೊಠಡಿ ತಿಳಿಸಿದೆ.

'ರಾತ್ರಿ ಸುರಿದ ಮಳೆಗೆ ಭೀಮಾಲಿ ಚೌಕ್‌ ಬಳಿ ರಸ್ತೆ ಕೊಚ್ಚಿಹೋಗಿದ್ದು, 200 ಯಾತ್ರಾರ್ಥಿಗಳು ಕೇದಾರನಾಥ ಮಾರ್ಗದಲ್ಲಿ ಸಿಲುಕಿಕೊಂಡಿದ್ದರು. ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ’ ಎಂದು ವಿಪತ್ತು ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಹೇಳಿದರು.

ಬಾಧಿತ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.