ADVERTISEMENT

ಆಂಧ್ರಪ್ರದೇಶದ ಹೊಸ ಭೂಪಟ ಹೀಗಿದೆ ನೋಡಿ...

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 10:56 IST
Last Updated 4 ಏಪ್ರಿಲ್ 2022, 10:56 IST
   

ಹೈದರಾಬಾದ್‌: ಆಂಧ್ರಪ್ರದೇಶ ಸರ್ಕಾರ ನೂತನ 13 ಜಿಲ್ಲೆಗಳನ್ನು ಗೆಜೆಟ್‌ ಅಧಿಸೂಚನೆ ಮೂಲಕ ಘೋಷಣೆ ಮಾಡಿದ ಬೆನ್ನಲ್ಲೆ ಹೊಸ ಭೂ‍ಪಟವನ್ನು ಪ್ರಕಟಿಸಿದೆ.

ಹೊಸ ಭೂಪಟದ ಬಗ್ಗೆ ಆಂಧ್ರ ಸರ್ಕಾರ ಶನಿವಾರ ರಾತ್ರಿ ಗೆಜೆಟಿಯರ್‌ನಲ್ಲಿ ಪ್ರಕಟಿಸಿದೆ. ಈ ಭೂಪಟವನ್ನು ಆಂಧ್ರ ಜನತೆ ಸಾಮಾಜಿಕ ಮಾಧ್ಯಮಗಳ ಮೂಲಕ ಶೇರ್‌ ಮಾಡುತ್ತಿದ್ದಾರೆ.

ಆಂಧ್ರದ ಹೊಸ ಭೂಪಟ...

ADVERTISEMENT

ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರು ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ನೂತನ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳಾಗಿ ನೇಮಕ ಮಾಡಿದ್ದಾರೆ.

ಹೊಸ ಜಿಲ್ಲೆಗಳನ್ನು ರಚಿಸುವ ಸಂಬಂಧ ಕಳೆದ ಜನವರಿಯಲ್ಲಿ ರಾಜ್ಯ ಸರ್ಕಾರವು ಕರಡು ಅಧಿಸೂಚನೆಯೊಂದನ್ನು ಹೊರಡಿಸಿ ಸಲಹೆಗಳನ್ನು ಆಹ್ವಾನಿಸಿತ್ತು.

ರಾಜ್ಯವು ಹೊಂದಿರುವ 25 ಲೋಕಸಭಾ ಕ್ಷೇತ್ರಗಳನ್ನೂ ಜಿಲ್ಲೆಗಳಾಗಿ ರೂಪಿಸಲಾಗಿದೆ. ಪೂರ್ವ ಗೋದಾವರಿ ಮತ್ತು ವಿಶಾಖಪಟ್ಟಣ ಜಿಲ್ಲೆಗಳಲ್ಲಿನ ಬುಡಕಟ್ಟು ಪ್ರದೇಶಗಳನ್ನು ಪ್ರತ್ಯೇಕಿಸಿ 26ನೇ ಜಿಲ್ಲೆಯನ್ನು ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.