ADVERTISEMENT

ಚೆನ್ನೈ: ₹100 ಕೋಟಿ ಮೌಲ್ಯದ ಹೆರಾಯಿನ್‌ ವಶ, ಇಬ್ಬರ ಬಂಧನ

ಪಿಟಿಐ
Published 7 ಮೇ 2021, 19:14 IST
Last Updated 7 ಮೇ 2021, 19:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ₹ 100 ಕೋಟಿ ಮೌಲ್ಯದ 15 ಕೆ.ಜಿ. ಅಧಿಕ ತೂಕದಷ್ಟು ಹೆರಾಯಿನ್‌ ಅನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಜಪ್ತಿ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರು ತಾಂಜಾನಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯಲು ಬಂದಿರುವುದಾಗಿ ಬಂಧಿತರು ಹೇಳಿದ್ದಾರೆ. ಆಸ್ಪತ್ರೆ ನೀಡಿದ್ದ ದಾಖಲೆಗಳ ಆಧಾರದಲ್ಲಿ ಅವರಿಗೆ ವೀಸಾ ನೀಡಲಾಗಿತ್ತು. ಬೆಂಗಳೂರಿಗೆ ತಲುಪಲು ನೇರ ವಿಮಾನ ಸಿಗದ ಕಾರಣ ಅವರು ಚೆನ್ನೈಗೆ ಬಂದಿಳಿದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಫ್ರಿಕಾದಿಂದ ಡ್ರಗ್ಸ್‌ನ ಕಳ್ಳ ಸಾಗಣೆ ಬಗ್ಗೆ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಹೆರಾಯಿನ್‌ ಸಾಗಿಸುತ್ತಿರುವುದು ಬೆಳಕಿಗೆ ಬಂತು ಎಂದು ಕಸ್ಟಮ್ಸ್‌ ಕಮಿಷನರ್‌ ರಾಜನ್‌ ಚೌಧರಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.