ADVERTISEMENT

ಹಿಜಾಬ್‌ ಗಲಾಟೆಯು ವಿವಾದವಲ್ಲ, ಪಿತೂರಿ: ಕೇರಳ ರಾಜ್ಯಪಾಲ

ಪಿಟಿಐ
Published 12 ಫೆಬ್ರುವರಿ 2022, 13:54 IST
Last Updated 12 ಫೆಬ್ರುವರಿ 2022, 13:54 IST
ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ (ಪಿಟಿಐ ಚಿತ್ರ)
ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ (ಪಿಟಿಐ ಚಿತ್ರ)   

ನವದೆಹಲಿ/ತಿರುವನಂತಪುರ: ಪ್ರಸ್ತುತ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಪಟ್ಟಿರುವ ಹಿಜಾಬ್‌ ಗಲಾಟೆಯು ವಿವಾದವಲ್ಲ, 'ಪಿತೂರಿ' ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ವ್ಯಾಖ್ಯಾನಿಸಿದ್ದಾರೆ.

ನೆರೆಯ ಕರ್ನಾಟದಲ್ಲಿ ನಡೆಯುತ್ತಿರುವ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದ ನವದೆಹಲಿಯಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗೆ ಆರಿಫ್‌ ಮೊಹಮ್ಮದ್‌ ಪ್ರತಿಕ್ರಿಯಿಸಿದರು.

'ದಯವಿಟ್ಟು ಇದನ್ನು ವಿವಾದವಾಗಿ ಪರಿಗಣಿಸಬೇಡಿ. ಇದು ಪಿತೂರಿ. ಎಲ್ಲೆಡೆ ಮುಸ್ಲಿಂ ಹೆಣ್ಣುಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸಬೇಕು. ಅವರನ್ನು ಕೆಳಗೆ ತಳ್ಳಬಾರದು. ಇದು (ಹಿಜಾಬ್‌ ಧರಿಸುವುದು) ಆಯ್ಕೆಯ ಪ್ರಶ್ನೆಯಲ್ಲ. ಆದರೆ ಒಂದು ಸಂಸ್ಥೆಯನ್ನು ಸೇರುವ ಸಂದರ್ಭ ಅಲ್ಲಿನ ನಿಯಮಪಾಲನೆ, ಶಿಸ್ತು ಮತ್ತು ವಸ್ತ್ರ ಸಂಹಿತೆಯನ್ನು ಅನುಸರಿಸುತ್ತೀರೋ ಅಥವಾ ಇಲ್ಲವೋ ಎಂಬುದಾಗಿದೆ' ಎಂದು ವಿವರಿಸಿದರು.

ADVERTISEMENT

'ಇಸ್ಲಾಂನ ಇತಿಹಾಸವನ್ನು ನೋಡಿದರೆ ಮಹಿಳೆಯರು ಹಿಜಾಬ್‌ ಧರಿಸುವುದನ್ನು ವಿರೋಧಿಸಿದ ನಿದರ್ಶನಗಳಿವೆ' ಎಂದು ಶುಕ್ರವಾರ ಆರಿಫ್‌ ಮೊಹಮ್ಮದ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.