ADVERTISEMENT

ಪ್ರವಾಸೋದ್ಯಮ ಉತ್ತೇಜನಕ್ಕೆ ಹಿಮಾಚಲ–ಗೋವಾ ಜಂಟಿ ಸಹಕಾರ

ಪಿಟಿಐ
Published 13 ಫೆಬ್ರುವರಿ 2023, 11:29 IST
Last Updated 13 ಫೆಬ್ರುವರಿ 2023, 11:29 IST
ಸುಖ್ವಿಂದರ್‌ ಸಿಂಗ್‌ ಸುಖು
ಸುಖ್ವಿಂದರ್‌ ಸಿಂಗ್‌ ಸುಖು   

ಶಿಮ್ಲಾ: ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಿಮಾಚಲ ಪ್ರದೇಶ ಮತ್ತು ಗೋವಾ ಪರಸ್ಪರ ಸಹಕಾರಿಸಲಿವೆ ಎಂದು ಸೋಮವಾರ ಅಧಿಕೃತ ಪ್ರಕಟಣೆ ತಿಳಿಸಿದೆ.

ವಿದೇಶಿ ಮತ್ತು ಸ್ವದೇಶಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಉಭಯ ರಾಜ್ಯಗಳು ವಿಶೇಷ ಪ್ಯಾಕೇಜ್‌ಗಳನ್ನು ರೂಪಿಸಲಿವೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಮತ್ತು ಗೋವಾ ಸಿಎಂ ಪ್ರಮೋದ್ ಸಾವಂತ್ ನಡುವೆ ನಡೆದ ಸಭೆಯಲ್ಲಿ ಈ ಪ್ರಸ್ತಾಪವನ್ನು ಚರ್ಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಭಾರತದ ಅತ್ಯುತ್ತಮ ಪ್ರವಾಸೋದ್ಯಮ ರಾಜ್ಯಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಗೋವಾ ಮುಂಚುಣಿಯಲ್ಲಿವೆ. ಒಂದು ಅನನ್ಯ ತಾಣವಾಗುವ ಸಾಮರ್ಥ್ಯವನ್ನು ಎರಡೂ ರಾಜ್ಯಗಳು ಹೊಂದಿವೆ. ಇದರ ಮೂಲಕ ಆರ್ಥಿಕತೆ ಉತ್ತೇಜಿಸುವುದರೊಂದಿಗೆ ಉದ್ಯೋಗಾವಕಾಶವನ್ನು ಒದಗಿಸಲಿವೆ ಎಂದು ಸುಖು ಹೇಳಿದ್ದಾರೆ.

ADVERTISEMENT

ಪ್ರವಾಸೋದ್ಯಮ ಮತ್ತು ವಿವಿಧ ಉದ್ಯಮಗಳ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲು ಎರಡೂ ರಾಜ್ಯಗಳು ಕೆಲಸ ಮಾಡುತ್ತವೆ ಎಂದು ಅವರು ತಿಳಿಸಿದ್ದಾರೆ.

ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಎರಡೂ ರಾಜ್ಯಗಳ ವಿದ್ಯಾರ್ಥಿಗಳ ನಡುವೆ ಸಾಗರ-ಪರ್ವತ ವಿಷಯದ ವಿಜ್ಞಾನ ಕಾರ್ಯಾಗಾರಗಳು ಮತ್ತು ಮಾಹಿತಿ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.