ADVERTISEMENT

ಮಾದಕ ವ್ಯಸನ ಮುಕ್ತ ಪುನರ್‌ವಸತಿ ನೀತಿ ರೂಪಿಸಲು ಸಿದ್ಧತೆ: ಹಿಮಾಚಲ ಪ್ರದೇಶ ಸರ್ಕಾರ

ಪಿಟಿಐ
Published 14 ಮೇ 2023, 8:11 IST
Last Updated 14 ಮೇ 2023, 8:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿಮ್ಲಾ: ಮಾದಕ ವ್ಯಸನಕ್ಕೆ ದಾಸರಾಗುತ್ತಿರುವ ಯುವಕರ ಆರೋಗ್ಯಕ್ಕಾಗಿ ಹಿಮಾಚಲ ಪ್ರದೇಶ ಸರ್ಕಾರವು ’ಮಾದಕ ವ್ಯಸನ ಮುಕ್ತ ಪುನರ್‌ವಸತಿ’ ನೀತಿಯನ್ನು ರೂಪಿಸಲಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತಿಳಿಸಿದ್ದಾರೆ.

ಈ ಕಾನೂನಿನ ಕರಡು ಪ್ರತಿ ಮೇಲಿನ ಸಭೆಯ ನಂತರ ಸುಖು ಮಾತನಾಡಿ, ‘ಯುವ ಪೀಳಿಗೆ ಮೊಬೈಲ್ ಫೋನ್‌ಗಳಿಗೆ ಅಂಟಿಕೊಂಡಿದೆ. ಇದು ಅವರನ್ನು ಮಾದಕ ವ್ಯಸನಕ್ಕೆ ಆಕರ್ಷಣೆಗೊಳ್ಳಲು ಕಾರಣವಾಗುತ್ತಿದೆ’ ಎಂದರು.

‘ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುವುದನ್ನು ತಪ್ಪಿಸಲು ನಮ್ಮ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ರಾಷ್ಟ್ರೀಯ ಸಂಸ್ಥೆಯ ಬೆಂಬಲದೊಂದಿಗೆ ಅತ್ಯಾಧುನಿಕ ಮಾದಕ ವ್ಯಸನ ಮುಕ್ತಿ ಮತ್ತು ಪುನರ್‌ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು‘ ಎಂದು ಹೇಳಿದರು.

ADVERTISEMENT

ಈ ಗುರಿಯನ್ನು ಸಾಧಿಸಲು ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಕೇಂದ್ರಕ್ಕಾಗಿ ಅಂದಾಜು ಭೂಮಿಯನ್ನು ಗುರುತಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮಾದಕ ವ್ಯಸನಿಗಳಿಗಷ್ಟೇ ಅಲ್ಲದೆ, ಕೈದಿಗಳಿಗೆ ಕೂಡ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ಈ ಕೇಂದ್ರ ಕಾರ್ಯ ನಿರ್ವಹಿಸುತ್ತದೆ ಎಂದರು.

ಈ ಮೂಲಕ ವ್ಯಸನಿಗಳ ಕಳೆದುಹೋದ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯವಾಗುತ್ತದೆ. ಇಲ್ಲಿ ಜೀವನದ ಪ್ರಗತಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಇದರಿಂದ ಆ ವ್ಯಕ್ತಿಗಳು ಸಾಮಾನ್ಯ ಜೀವನಕ್ಕೆ ಮರಳಲು ಹಾಗೂ ಸಮಾಜದೊಂದಿಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ‘ ಎಂಬ ಆಶಯವನ್ನು ಸುಖು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.