ADVERTISEMENT

ಹಿಮಾಚಲ ಪ್ರದೇಶ: ಬಿಲಾಸ್‌ಪುರದ ಕಾಂಗ್ರೆಸ್‌ನ ಮಾಜಿ ಶಾಸಕನ ಮೇಲೆ ಗುಂಡಿನ ದಾಳಿ

ಪಿಟಿಐ
Published 14 ಮಾರ್ಚ್ 2025, 15:58 IST
Last Updated 14 ಮಾರ್ಚ್ 2025, 15:58 IST
<div class="paragraphs"><p> ಗುಂಡಿನ ದಾಳಿ (ಸಾಂದರ್ಭಿಕ&nbsp; ಚಿತ್ರ)</p></div>

ಗುಂಡಿನ ದಾಳಿ (ಸಾಂದರ್ಭಿಕ  ಚಿತ್ರ)

   

ಬಿಲಾಸ್‌ಪುರ: ಹಿಮಾಚಲ ಪ್ರದೇಶದ ಬಿಲಾಸ್‌ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಮಾಜಿ ಶಾಸಕ ಬಂಬರ್ ಠಾಕೂರ್ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿ ಠಾಕೂರ್ ಮತ್ತು ಅವರ ಭದ್ರತಾ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರು ಸುಮಾರು 12 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಬಿಲಾಸ್‌ಪುರದಲ್ಲಿರುವ ತಮ್ಮ ಪತ್ನಿಗೆ ನೀಡಲಾದ ಸರ್ಕಾರಿ ವಸತಿಗೃಹದ ಅಂಗಳದಲ್ಲಿ ಸಂಬಂಧಿಕರೊಂದಿಗೆ ಕುಳಿತಿದ್ದಾಗ ನಾಲ್ವರು ಆಗಮಿಸಿ ಗುಂಡು ಹಾರಿಸಿದ್ದಾರೆ.

ಠಾಕೂರ್ ಅವರ ಕಾಲಿಗೆ ಗುಂಡು ತಗುಲಿದೆ.

ದಾಳಿ ನಡೆಸಿ ಪರಾರಿಯಾದ ಆರೋಪಿಗಳನ್ನು ಹಿಡಿಯಲು ಶೋಧ ಆರಂಭಿಸಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಸಂದೀಪ್ ಧವಲ್ ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ದಾಳಿ ನಡೆದ ತಕ್ಷಣ, ಠಾಕೂರ್ ಅವರನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿಗೆ ಕರೆದುಕೊಂಡು ಹೋಗಲಾಗಿದೆ. ಭದ್ರತಾ ಅಧಿಕಾರಿ ಬಿಲಾಸ್‌ಪುರದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.