ADVERTISEMENT

ಕೊಕಾ ಕೋಲಾದಲ್ಲಿ ಶಾಶ್ವತ ವರ್ಕ್‌ ಫ್ರಮ್‌ ಹೋಮ್‌ಗೆ ಅವಕಾಶ

ಪಿಟಿಐ
Published 8 ಅಕ್ಟೋಬರ್ 2020, 5:59 IST
Last Updated 8 ಅಕ್ಟೋಬರ್ 2020, 5:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕಚೇರಿಯಲ್ಲಿ ಭೌತಿಕ ಉಪಸ್ಥಿತಿಯ ಅಗತ್ಯವಿಲ್ಲದ ಸಂಸ್ಥೆಯ ಉದ್ಯೋಗಿಗಳಿಗೆ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ (ವರ್ಕ್‌ ಫ್ರಮ್‌ ಹೋಮ್‌) ಆಯ್ಕೆಯನ್ನು ತನ್ನ ಹೊಸ ನೀತಿಯ ಭಾಗವಾಗಿ ಪರಿಚಯಿಸಿರುವುದಾಗಿ ಪಾನೀಯ ತಯಾರಕ ಸಂಸ್ಥೆ ಹಿಂದೂಸ್ತಾನ್ ಕೋಕಾ-ಕೋಲಾ ಬೆವ್ರೆಜಸ್‌ (ಎಚ್‌ಸಿಸಿಬಿ) ಬುಧವಾರ ಹೇಳಿದೆ.

ಈ ಹೊಸ ನೀತಿಯ ಅಡಿಯಲ್ಲಿ ಉದ್ಯೋಗಿಗಳ ಸುರಕ್ಷತೆ, ಮಾನಸಿಕ–ದೈಹಿಕ ಸೌಖ್ಯ ಮತ್ತು ಮನೆಯಿಂದಲೇ ಕೆಲಸ ಮಾಡಲು ಬೇಕಾದ ಸೌಕರ್ಯಗಳಿಗಾಗಿ ಹಣಕಾಸಿನ ನೆರವನ್ನೂ ನೀಡಲಾಗುತ್ತದೆ ಎಂದು ಕೊಕಾ ಕೋಲಾ ಹೇಳಿದೆ.

‘ಕಂಪನಿಯ ಮೂಲ ಸಿದ್ಧಾಂತವಾದ ಉದ್ಯೋಗಿಗಳ ಆರೈಕೆ ಮತ್ತು ಕೆಲಸದ ಸರಳೀಕರಣದ ಆಧಾರದ ಮೇಲೆ ಈ ಹೊಸ ನೀತಿಯನ್ನು ರೂಪಿಸಲಾಗಿದೆ. ಕಾರ್ಖಾನೆ ಅಥವಾ ಮಾರಾಟ ವಿಭಾಗದಂಥ ವಿಭಾಗಗಳಲ್ಲಿ ದೈಹಿಕವಾಗಿ ಹಾಜರಾಗುವ ಅಗತ್ಯವಿಲ್ಲದವರು ಕೋವಿಡ್‌ ಸಾಂಕ್ರಾಮಿಕದ ನಂತರವೂ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಮಾಡಿಕೊಳ್ಳಬಹುದು. ಉದ್ಯೋಗಿಗಳು ಮತ್ತು ಅವರ ಕುಟುಂಬಸ್ಥರು ಕೆಲಸದ ಸ್ಥಳವನ್ನೂ ಅಂಜಿಕೆಗಳನ್ನು ಮೀರಿ ಸುರಕ್ಷಿತ ಹಾಗೂ ನಿಶ್ಚಿಂತ ಭಾವ ಹೊಂದುವುದನ್ನು ಈ ನೀತಿ ಖಾತ್ರಿಪಡಿಸುತ್ತದೆ,’ ಎಂದು ಸಂಸ್ಥೆ ಹೇಳಿದೆ.

ADVERTISEMENT

‘ಸಂಸ್ಥೆ ಮತ್ತು ಉದ್ಯೋಗಿಗಳು ಕೂಡಿ ಈ ನೀತಿಯನ್ನು ರೂಪಿಸಿರುವುದು ಇದರ ವಿಶೇಷ. ಪರಿಸ್ಥಿತಿಗೆ ಅನುಗುಣವಾಗಿ ನೀತಿಗೆ ಅಗತ್ಯವಿರುವ ಯಾವುದೇ ಮಾರ್ಪಾಡುಗಳನ್ನು ಮಾಡಲು ನಾವು ಬದ್ಧರಾಗಿದ್ದೇವೆ,’ ಎಂದು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಇಂದ್ರಜೀತ್ ಸೇನ್‌ಗುಪ್ತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.