ಆರೋಪಿಗಳು
ಬೆಂಗಳೂರು: ಸುಂದರಿಯೊಬ್ಬಳು ಮಧುಬಲೆ ಬೀಸಿ (ಹನಿಟ್ರ್ಯಾಪ್) ಬಳಿಕ ಬ್ಲಾಕ್‌ಮೇಲ್ ಮಾಡುತ್ತಿದ್ದರಿಂದ ಮನನೊಂದು ಯುವ ಚಾರ್ಟೆಡ್ ಅಕೌಂಟೆಡ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮುಂಬೈನ ಸಾಂಟಾ ಕ್ರೂಜ್‌ನ ರಾಜ್ ಲೀಲಾ (32) ಎಂಬುವರೇ ಇತ್ತೀಚೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಬಗ್ಗೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಸಬಾ ಖುರೇಶಿ, ರಾಹುಲ್ ಪಾರವಾನಿ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ಸಾವಿಗೂ ಮುನ್ನ ರಾಜ್ ಲೀಲಾ ಅವರು ಡೆತ್ ನೋಟ್ ಬರೆದಿಟ್ಟಿದ್ದು, ‘ನಾನು ವೃತ್ತಿಯಿಂದ ಗಳಿಸಿದ್ದ ಹಣವನ್ನು ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿದ್ದ ಹಣವನ್ನು ಕಬಳಿಸುವ ಬಗ್ಗೆ ಖುರೇಶಿ ತನ್ನ ಸಹವರ್ತಿ ರಾಹುಲ್ ಜೊತೆ ಸೇರಿ ಸಂಚು ರೂಪಿಸಿದ್ದಳು. ಈಗಾಗಲೇ ₹3 ಕೋಟಿಗೂ ಅಧಿಕ ಹಣ ತೆಗೆದುಕೊಂಡಿದ್ದರು. ಇನ್ನೂ ಹೆಚ್ಚಿನ ಹಣವನ್ನು ನನ್ನಿಂದ ವಸೂಲಿ ಮಾಡಲು ನಿರಂತರ ಕಿರುಕುಳ ನೀಡುತ್ತಿದ್ದರು. ಅವರ ವಿರುದ್ಧ ಕ್ರಮ ಆಗಲೇಬೇಕು. ಅಮ್ಮ ನನ್ನನ್ನು ಕ್ಷಮಿಸಿಬಿಡಿ’ ಎಂದು ರಾಹುಲ್ ಬರೆದಿಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ರಾಜ್ ಲೀಲಾ ಅವರು ಸಬಾ ಖುರೇಶಿ ಜೊತೆ ದೈಹಿಕ ಸಂಬಂಧದಲ್ಲಿದ್ದರು. ಇದರ ವಿಡಿಯೊ ಮಾಡಿಕೊಂಡಿದ್ದ ಸಬಾ ಖುರೇಶಿ, ಹಣಕ್ಕಾಗಿ ರಾಜ್ ಅವರನ್ನು ಪೀಡಿಸುತ್ತಿದ್ದರು ಎಂದು ಪೊಲೀಸರ ಹೇಳಿಕೆ ಉಲ್ಲೇಖಿಸಿ ನ್ಯೂಸ್ 18 ಇಂಗ್ಲಿಷ್ ವೆಬ್‌ಸೈಟ್ ವರದಿ ಮಾಡಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.