ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಗಳಲ್ಲಿ ಭಯೋತ್ಪಾದಕರನ್ನು ಗುರಿಯಾಗಿಸಿ ಭಾರತೀಯ ಸಶಸ್ತ್ರ ಪಡೆ ಕಾರ್ಯಾಚರಣೆ ನಡೆಸಿದೆ.
(ಪಿಟಿಐ ಚಿತ್ರ)
ಉಗ್ರರ ಒಂಬತ್ತು ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿ ಪರಾಕ್ರಮ ಮೆರೆದಿದೆ.
ಲಷ್ಕರ್-ಎ-ತಯಬಾ ಹಾಗೂ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ.
ಉಗ್ರರ ನೆಲೆಗಳ ವಿವರ:
1. ಮರ್ಕಜ್ ಸುಭಾನ್ ಅಲ್ಲಾಹ್, ಬಹವಾಲ್‌ಪುರ (ಜೆಇಎಂ)
2. ಮರ್ಕಜ್ ತಯಬಾ, ಮುರಿದ್ಕೆ (ಎಲ್‌ಇಟಿ)
3. ಸರ್ಜಲ್, ತೆಹ್ರಾ ಕಲನ್ (ಜೆಇಎಂ)
4. ಮೆಹಮೂನಾ ಜೋಯಾ, ಸಿಯಾಲ್‌ಕೋಟ್ (ಎಚ್‌ಎ)
5. ಮರ್ಕಜ್ ಅಹ್ಲೆ ಹಡಿತ್, ಬರ್ನಾಲ (ಎಲ್‌ಇಟಿ)
6. ಮರ್ಕಜ್ ಅಬ್ಬಾಸ್, ಕೊಟ್ಲಿ (ಜೆಇಎಂ)
7. ಮಸ್ಕರ್ ರಹೀಲ್ ಶಾಹೀದ್, ಕೊಟ್ಲಿ (ಎಚ್‌ಎಂ)
8. ಶವಾಯಿ ನಲ್ಲಾ ಕ್ಯಾಂಪ್, ಮುಜಾಫರಬಾದ್ (ಎಲ್‌ಇಟಿ)
9. ಸೈಯದ್ನಾ ಬಿಲಾಲ್ ಕ್ಯಾಪ್, ಮುಜಾಫರಬಾಬ್ (ಜೆಇಎಂ)
ಪಾಕ್ ನಾಗರಿಕರನ್ನು ಗುರಿಯಾಗಿಸದೇ ಉಗ್ರರ ನೆಲೆ ಧ್ವಂಸ
ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದ ಪ್ರಧಾನಿ ಮೋದಿ
ಆಪರೇಷನ್ ಸಿಂಧೂರ
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.