ADVERTISEMENT

ಕಾಂಗ್ರೆಸ್ ಅನ್ನು ಎಷ್ಟು ದಿನ ಪಲ್ಲಕ್ಕಿಯಲ್ಲಿ ಹೊರುವುದು: ಡಿಎಂಕೆ ಶಾಸಕ ನೆಹರು

ಏಜೆನ್ಸೀಸ್
Published 22 ಜೂನ್ 2019, 10:16 IST
Last Updated 22 ಜೂನ್ 2019, 10:16 IST
   

ಚೆನ್ನೈ: ಕಾಂಗ್ರೆಸ್‌ ಅನ್ನು ಎಷ್ಟು ದಿನ ಪಲ್ಲಕ್ಕಿಯಲ್ಲಿ ಹೊತ್ತು ಮರೆಸುವುದು? ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಾದರೂ ನಾವು ಏಕಾಂಗಿಯಾಗಿ ಸ್ಪರ್ಧೆ ಮಾಡೋಣ ಎಂದು ತಮಿಳುನಾಡಿನ ದ್ರಾವಿಡ ಮುನ್ನೇಟ್ರ ಕಳಗಂನ (ಡಿಎಂಕೆ)ಶಾಸಕ ಕೆ.ಎನ್‌ ನೆಹರು ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾರೆ.

ತಮಿಳುನಾಡಿನಲ್ಲಿ ತಲೆದೋರಿರುವ ನೀರಿನ ಬವಣೆಯ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಡಿಎಂಕೆ ತಿರುಚ್ಚಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನೆಯ ವೇಳೆ ಮಾತನಾಡಿರುವ ತಿರುಚ್ಚಿ ಪಶ್ಚಿಮ ಕ್ಷೇತ್ರದ ಶಾಸಕ ಕೆ.ಎನ್‌ ನೆಹರು, ‘ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸುವುದು ಸೂಕ್ತ. ಎಷ್ಟು ದಿನ ನಾವು ಕಾಂಗ್ರೆಸ್‌ ಅನ್ನು ಪಲ್ಲಕ್ಕಿಯಲ್ಲಿ ಹೊರುವುದು? ಇದು ನನ್ನ ಅಭಿಪ್ರಾಯ ಮಾತ್ರ. ಆದರೆ, ಪಕ್ಷದ ವರಿಷ್ಠ ಎಂ.ಕೆ ಸ್ಟಾಲಿನ್‌ ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧ. ಒಂದು ವೇಳೆ ಹೆಗಲ ಮೇಲೆ ಕಾಂಗ್ರೆಸ್‌ ಅನ್ನು ಹೊರಬೇಕು ಎಂದು ಅವರು ಹೇಳಿದರೆ ನಾವು ಅದಕ್ಕೆ ಸಿದ್ಧ,’ ಎಂದೂ ನೆಹರೂ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ 38 ಕ್ಷೇತ್ರಗಳ ಪೈಕಿಡಿಎಂಕೆ ಮೈತ್ರಿಯೊಂದಿಗೆ 9 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್‌ 8ರಲ್ಲಿ ಗೆದ್ದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.