ADVERTISEMENT

ಫೆ.15ರವರೆಗೆ ಟೋಲ್‌ ಪ್ಲಾಜಾಗಳಲ್ಲಿ ನಗದು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 12:13 IST
Last Updated 1 ಜನವರಿ 2021, 12:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫಾಸ್ಟ್ಯಾಗ್‌ ಅನ್ನು ಶುಕ್ರವಾರದಿಂದ (ಜ.1) ಟೋಲ್‌ ಪ್ಲಾಜಾಗಳಲ್ಲಿ ಕಡ್ಡಾಯ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಈ ಹಿಂದೆ ಘೋಷಿಸಿದ್ದರೂ, ಫೆ.15ರವರೆಗೆ ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಪ್ಲಾಜಾಗಳಲ್ಲಿ ಹೈಬ್ರಿಡ್‌ ಲೇನ್‌ಗಳು (ನಗದು ಮತ್ತು ಫಾಸ್ಟ್ಯಾಗ್‌ ಪಥ) ಕಾರ್ಯನಿರ್ವಹಿಸಲಿವೆ ಎಂದು ಸಚಿವಾಲಯವು ತಿಳಿಸಿದೆ.

ಈ ಮೂಲಕ ಮುಂದಿನ ತಿಂಗಳಾರ್ಧದವರೆಗೂ, ವಾಹನ ಸವಾರರು ನಗದು ಮೂಲಕ ಅಥವಾ ಫಾಸ್ಟ್ಯಾಗ್‌ ಬಳಸಿ ಟೋಲ್‌ ಪಾವತಿಸಬಹುದಾಗಿದೆ. ಫಾಸ್ಟ್ಯಾಗ್‌ ಪಥದಲ್ಲಿ ಕೇವಲ ಫಾಸ್ಟ್ಯಾಗ್‌ ಮೂಲಕವೇ ಪಾವತಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

‘2017ರ ಡಿ.1ಕ್ಕಿಂತಲೂ ಹಿಂದೆ ಮಾರಾಟವಾದ ಎಲ್ಲ ‘ಎಂ’ ಮತ್ತು ‘ಎನ್‌’ ಮಾದರಿಯ ಮೋಟಾರು ವಾಹನಗಳಿಗೆ 2021 ಜ.1ರಿಂದ ಫ್ಯಾಸ್ಟ್ಯಾಗ್‌ ಕಡ್ಡಾಯ’ ಎಂದು ಸಚಿವಾಲಯವು ಗುರುವಾರ ಪ್ರಕಟಣೆಯಲ್ಲಿ ತಿಳಿಸಿತ್ತು. ‘ಕೇಂದ್ರ ಮೋಟಾರು ವಾಹನ ನಿಯಮದಂತೆ ಶೇ 100ರಷ್ಟು ಇ–ಟೋಲ್‌ ಅನುಷ್ಠಾನಕ್ಕೆ ಸಚಿವಾಲಯವು ಬದ್ಧವಾಗಿದೆ’ ಎಂದು ಇದೇ ವೇಳೆ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.