ADVERTISEMENT

ಹೈದರಾಬಾದ್: ಸಿನಿಮಾ ಬಿಡುಗಡೆಗೂ ಮುನ್ನವೇ ಪೈರಸಿ ಮಾಡುತ್ತಿದ್ದ ಹ್ಯಾಕರ್‌ ಬಂಧನ

ಪಿಟಿಐ
Published 16 ನವೆಂಬರ್ 2025, 13:06 IST
Last Updated 16 ನವೆಂಬರ್ 2025, 13:06 IST
   

ಹೈದರಾಬಾದ್: ಚಲನಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗುವುದಕ್ಕೂ ಮೊದಲೇ ಅದರ ಪೈರೇಟೆಡ್‌ ಕಾಪಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್‌ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಆರೋಪಿಯನ್ನು ರವಿ ಎಂದು ಗುರುತಿಸಲಾಗಿದೆ. ವಿದೇಶಗಳಲ್ಲಿ ವಾಸವಿದ್ದು ಸಿನಿಮಾವನ್ನು ಪೈರಸಿ ಮಾಡುತ್ತಿದ್ದ, ಇದರಿಂದ ಹಲವು ಸಿನಿಮಾ ನಿರ್ಮಾಪಕರು ನಷ್ಟ ಅನುಭವಿಸಿದ್ದರು. ಅವರು ಈ ಕುರಿತು ದೂರು ನೀಡಿದ್ದರು. ಆರೋಪಿಯು ಶನಿವಾರ ಭಾರತಕ್ಕೆ ಆಗಮಿಸಿದ ವೇಳೆ ಅವನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಡಿಜಿಟಲ್‌ ಕಂಪನಿಗಳ ಸರ್ವರ್‌ಗಳನ್ನು ಹ್ಯಾಕ್‌ ಮಾಡುತ್ತಿದ್ದ ಆರೋಪಿಯು, ಸಿನಿಮಾ ಬಿಡುಗಡೆಗೂ ಮುನ್ನವೇ ಅದರ ಪೈರೇಟೆಡ್‌ ಕಾಪಿಯನ್ನು ವೆಬ್‌ಸೈಟ್‌ನಲ್ಲಿ ಹರಿಬಿಡುತ್ತಿದ್ದ. ಇದರಿಂದ ಚಿತ್ರರಂಗಕ್ಕೆ ಅಪಾರ ಹಾನಿಯಾಗಿತ್ತು ಎಂದು ತಿಳಿಸಿದ್ದಾರೆ.

ADVERTISEMENT

ಆರೋಪಿಯ ವಿಚಾರಣೆಯ ನಂತರ ಮತ್ತಷ್ಟು ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಹಿಂದೆ ರವಿ ತನ್ನನ್ನು ಬಂಧಿಸುವಂತೆ ಪೊಲೀಸರಿಗೆ ಸವಾಲು ಹಾಕಿದ್ದ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.