ಹೈದರಾಬಾದ್ : ನಗರದ ಮಕ್ತಾ ಬಡವಾಣೆಯಲ್ಲಿ ವಾಸವಾಗಿದ್ದ ಕರ್ನಾಟಕದ ಕಲಬುರ್ಗಿ ಮೂಲದ ಕುಟುಂಬವೊಂದು ಸಾಲ ಒತ್ತಡಕ್ಕೆ ಮಣಿದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಕುಟುಂಬವು ಎರಡು ವರ್ಷಗಳಿಂದ ಹೈದರಾಬಾದ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿತ್ತು. ಇವರ ಕುಟುಂಬದಲ್ಲಿ ಐವರು ಇದ್ದರು. 60 ವರ್ಷದ ಗಂಡ ಹಾಗೂ ಆತನ 55 ವರ್ಷದ ಹೆಂಡತಿ, ಅಳಿಯ ಮಗಳು ಹಾಗೂ ಮೊಮ್ಮಗಳು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ ತನಿಖೆಯನ್ನು ಶುರು ಮಾಡಲಾಗಿದೆ. ಮೃತ ಕುಟುಂಬವು ಆರ್ಥಿಕವಾಗಿ ಸಮಸ್ಯೆಗೆ ಸಿಲುಕಿತ್ತು. ಕುಟುಂಬವು ಸಾಲ ತೆಗೆದುಕೊಂಡಿರುವುದಾಗಿ ಆದನ್ನು ಮರುಪಾವತಿ ಮಾಡುವ ಒತ್ತಡಕ್ಕೆ ಮಣಿದು ವಿಷ ಸೇವಿಸಿ ಮಾಡಿಕೊಂಡು ಮೃತಪಟ್ಟಿದ್ದಾರೆಂದು ಮೀಯಾಪುರದ ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.