ADVERTISEMENT

'ಸುಳ್ಳು ಹೇಳುವುದಕ್ಕೆ ನಾನೇನು ಮೋದಿಯಲ್ಲ, ಧೈರ್ಯ ಇದ್ದರೆ ನೇರ ಚರ್ಚೆಗೆ ಬರಲಿ'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 13:33 IST
Last Updated 4 ಏಪ್ರಿಲ್ 2019, 13:33 IST
   

ಕೊಲ್ಕತ್ತ: ಪ್ರಧಾನಿ ನರೇಂದ್ರ ಮೋದಿಯನ್ನು ಎಕ್ಸ್‌ಪೈರಿ ಬಾಬು ಎಂದು ಹೇಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಧೈರ್ಯವಿದ್ದರೆ ಮೋದಿ ನೇರ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

ಬುಧವಾರ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದಮಮತಾ, ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಮೋದಿ ಆರೋಪಿಸುತ್ತಿದ್ದಾರೆ. ಸುಳ್ಳು ಹೇಳುವುದಕ್ಕೆ ನಾನೇನು ಮೋದಿಯಲ್ಲ, ನಾನು ಸುಳ್ಳು ಹೇಳುವುದಿಲ್ಲ ಎಂದಿದ್ದಾರೆ.

ಮೋದಿಯವರ ಐದು ವರ್ಷದ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ 12,000 ರೈತರು ಆತ್ಮಹತ್ಯೆ ಮಾಡಿದ್ದಾರೆ. ಆದಾಗ್ಯೂ, ಟಿಎಂಸಿ ಸರ್ಕಾರ ಬಂಗಾಳದ ರೈತರ ಆದಾಯವನ್ನು ಮೂರು ಪಟ್ಟು ಏರಿಸಿದೆ ಎಂದಿದ್ದಾರೆ ಮಮತಾ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.