ADVERTISEMENT

ಚೀನಾದೊಂದಿಗಿನ ಸಂಘರ್ಷ ಬೆನ್ನಲ್ಲೇ ಐಎಎಫ್‌ ಸಮರಾಭ್ಯಾಸ ಆರಂಭ

ಪಿಟಿಐ
Published 30 ಜನವರಿ 2023, 16:17 IST
Last Updated 30 ಜನವರಿ 2023, 16:17 IST
ರಫೇಲ್‌ ಯುದ್ಧ ವಿಮಾನಗಳು 
ರಫೇಲ್‌ ಯುದ್ಧ ವಿಮಾನಗಳು    

ನವದೆಹಲಿ: ಅರುಣಾಚಲಪ್ರದೇಶದ ತವಾಂಗ್‌ ಸೆಕ್ಟರ್‌ನಲ್ಲಿ ನಡೆದಿದ್ದ ಚೀನಾದೊಂದಿಗಿನ ಸೇನಾ ಸಂಘರ್ಷದ ಬೆನ್ನಲ್ಲೇ ಭಾರತೀಯ ವಾಯುಪಡೆಯು (ಐಎಎಫ್‌) ತನ್ನ ಯುದ್ಧ ಸಾಮರ್ಥ್ಯ ಪರೀಕ್ಷಿಸಿಕೊಳ್ಳುವ ಸಲುವಾಗಿ ಈಶಾನ್ಯ ಗಡಿ ಪ್ರದೇಶದಲ್ಲಿ ಭಾರಿ ಸಮರಾಭ್ಯಾಸ ನಡೆಸಲು ಮುಂದಾಗಿದ್ದು, ಇದಕ್ಕೆ ಸೋಮವಾರ ಚಾಲನೆ ಲಭಿಸಿದೆ.

ಈ ಸಮರಾಭ್ಯಾಸದಲ್ಲಿ ಐಎಎಫ್‌ನ ಯುದ್ಧ ವಿಮಾನಗಳಾದ ರಫೇಲ್‌ ಮತ್ತು ಸುಖೋಯ್‌–30ಎಂಕೆಐ ಭಾಗವಹಿಸಲಿವೆ.

‘ಪೂರ್ವಿ ಆಕಾಶ್‌ ಹೆಸರಿನಡಿ ಪ್ರತಿ ವರ್ಷವೂ ಆಯೋಜಿಸಲಾಗುವ ಕಮಾಂಡ್‌ ಹಂತದ ಸಮರಾಭ್ಯಾಸವು ಸೋಮವಾರ ಆರಂಭವಾಗಿದೆ. ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷ ಇದನ್ನು ಹಮ್ಮಿಕೊಳ್ಳಲು ಆಗಿರಲಿಲ್ಲ’ ಎಂದು ಐಎಎಫ್‌ನ ಪೂರ್ವ ಏರ್‌ ಕಮಾಂಡ್‌ ಟ್ವೀಟ್‌ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.