ADVERTISEMENT

ರಫೇಲ್‌ ಆಗಮನಕ್ಕೆ ಕ್ಷಣಗಣನೆ: ಅಂಬಾಲ ವಾಯುನೆಲೆ ಸುತ್ತ ಬಿಗಿ ಭದ್ರತೆ

ಏಜೆನ್ಸೀಸ್
Published 29 ಜುಲೈ 2020, 4:47 IST
Last Updated 29 ಜುಲೈ 2020, 4:47 IST
ರಫೇಲ್‌ ಯುದ್ಧ ವಿಮಾನ
ರಫೇಲ್‌ ಯುದ್ಧ ವಿಮಾನ   

ಹರಿಯಾಣ: ಫ್ರಾನ್ಸ್‌ನಿಂದ ಹೊರಟಿರುವಮೊದಲ ಹಂತದಐದು ರಫೇಲ್‌ ಯುದ್ಧ ವಿಮಾನಗಳುಇಂದು ಮಧ್ಯಾಹ್ನ ಅಂಬಾಲವಾಯುನೆಲೆಗೆ ಬಂದಿಳಿಯಲಿದ್ದು,ಭಾರತೀಯ ವಾಯುಪಡೆಯಮುಖ್ಯಸ್ಥಏರ್ ಮಾರ್ಷಲ್ರಾಕೇಶ್ ಕುಮಾರ್ ಸಿಂಗ್ ಭದೌರಿಯಾ(ಆರ್‌ಕೆಎಸ್ ಭದೌರಿಯಾ)ಬರಮಾಡಿಕೊಳ್ಳಲಿದ್ದಾರೆ.

ವಾಯುನೆಲೆ ಸುತ್ತ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.ಪಕ್ಕದ ನಾಲ್ಕು ಹಳ್ಳಿಗಳಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗಿದ್ದು,ಯುದ್ಧ ವಿಮಾನಗಳುಬಂದಿಳಿಯುವ ದೃಶ್ಯ ಸೆರೆ ಹಿಡಿಯುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ...ಭಾರತಕ್ಕೆ ‘ರಫೇಲ್ ಬಲ’

ADVERTISEMENT

ಯುದ್ಧವಿಮಾನ ಖರೀದಿಗೆ ಫ್ರಾನ್ಸ್–ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ತಂಡದಲ್ಲಿ ಐದು ವಿಮಾನಗಳು ಭಾರತಕ್ಕೆ ಬರುತ್ತಿವೆ. ಇನ್ನು ಐದು ವಿಮಾನಗಳನ್ನು ಫ್ರಾನ್ಸ್‌ನಲ್ಲಿ ತರಬೇತಿಗೆ ಬಳಸಿಕೊಳ್ಳಲಾಗುತ್ತಿದೆ.

ಲಡಾಖ್‌ನಲ್ಲಿ ಭಾರತ–ಚೀನಾ ನಡುವೆ ಗಡಿ ಸಮಸ್ಯೆ ಉಂಟಾಗಿರುವ ಸಮಯದಲ್ಲೇ, ಬಲಿಷ್ಠ ವಿಮಾನಗಳು ವಾಯುಪಡೆಗೆ ಸೇರ್ಪಡೆಯಾಗುತ್ತಿರುವುದು ದೇಶದ ಸಾಮರ್ಥ್ಯಕ್ಕೆ ಬಲ ತುಂಬಿದೆ. ಆಗಸ್ಟ್ ಮಧ್ಯಭಾಗದಲ್ಲಿ ವಿಮಾನಗಳ ಔಪಚಾರಿಕ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ವಾಯುಪಡೆ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.