ADVERTISEMENT

‘ರಫೇಲ್‌, ಎಸ್‌–400ನಿಂದ ವಾಯುಪಡೆ ಸಬಲ’

ವಾಯುಪಡೆ ದಿನಾಚರಣೆಯಲ್ಲಿ ಐಎಎಫ್‌ ಮುಖ್ಯಸ್ಥ ಧನೋಆ

ಪಿಟಿಐ
Published 8 ಅಕ್ಟೋಬರ್ 2018, 19:33 IST
Last Updated 8 ಅಕ್ಟೋಬರ್ 2018, 19:33 IST
ವಾಯುಪಡೆಯ ದಿನದ ಅಂಗವಾಗಿ ಗಾಜಿಯಾಬಾದ್‌ನ ಹಿಂಡನ್‌ ಸೇನಾ ನೆಲೆಯಲ್ಲಿ ಸಾರಂಗ್‌ ಹೆಲಿಕಾಪ್ಟರ್‌ಗಳ ವೈಮಾನಿಕ ಪ್ರದರ್ಶನ ನಡೆಯಿತು ಚಿತ್ರ– ಪಿಟಿಐ
ವಾಯುಪಡೆಯ ದಿನದ ಅಂಗವಾಗಿ ಗಾಜಿಯಾಬಾದ್‌ನ ಹಿಂಡನ್‌ ಸೇನಾ ನೆಲೆಯಲ್ಲಿ ಸಾರಂಗ್‌ ಹೆಲಿಕಾಪ್ಟರ್‌ಗಳ ವೈಮಾನಿಕ ಪ್ರದರ್ಶನ ನಡೆಯಿತು ಚಿತ್ರ– ಪಿಟಿಐ   

ಹಿಂಡನ್, ಉತ್ತರ ಪ್ರದೇಶ: ‘ಯಾವುದೇ ಪರಿಸ್ಥಿತಿಎದುರಿಸಲು ಭಾರತೀಯ ವಾಯು ಸೇನೆ (ಐಎಎಫ್‌) ಸನ್ನದ್ಧವಾಗಿದೆ. 36 ರಫೇಲ್‌ ಯುದ್ಧ ವಿಮಾನಗಳು ಹಾಗೂ ಎಸ್‌–400 ಕ್ಷಿಪಣಿ ವ್ಯವಸ್ಥೆಯು ನಮ್ಮ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿವೆ’ ಎಂದು ವಾಯು ಸೇನೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಬಿ.ಎಸ್‌.ಧನೋಆ ಹೇಳಿದರು.

‘ದೇಶದ ರಕ್ಷಣೆಗಾಗಿ ಎಂಥದೇ ಪರಿಸ್ಥಿತಿಯನ್ನು ಎದುರಿಸಲು ಐಎಎಫ್‌ ಸನ್ನದ್ಧವಾಗಿದೆ. ಐಎಎಫ್‌ ನಿರಂತರವಾಗಿ ಬೆಳೆಯುತ್ತ ವರ್ಷದಿಂದ ವರ್ಷಕ್ಕೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದೆ. ಅನೇಕ ಕಾರ್ಯಾಚರಣೆಗಳಲ್ಲಿ ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ತುರ್ತು ಸೂಚನೆಗಳನ್ನು ನಿರ್ವಹಿಸಲುವಾಯುಪಡೆಯ ಸಿಬ್ಬಂದಿ ಸದಾಕಾಲ ಸನ್ನದ್ಧವಾಗಿರಬೇಕಾಗಿರುತ್ತದೆ’ ಎಂದು ಸೋಮವಾರ ವಾಯು ಸೇನೆಯ ದಿನಾಚರಣೆಯಲ್ಲಿ ತಿಳಿಸಿದರು.

‘36 ರಫೇಲ್ ವಿಮಾನಗಳು, ಎಸ್ -400 ಕ್ಷಿಪಣಿ ವ್ಯವಸ್ಥೆಗಳು, ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಮತ್ತು ಹೆಚ್ಚಿನ ಭಾರ ಹೊರುವ ಚಿನೂಕ್ ಹೆಲಿಕಾಪ್ಟರ್‌ಗಳು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿವೆ’ ಎಂದು ಧನೋಆ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.