ADVERTISEMENT

ಅಭಿನಂದನ್‌ ಜತೆ ಸೆಲ್ಫಿ ತೆಗೆದು ಅಭಿಮಾನ ಮೆರೆದ ಸಹೋದ್ಯೋಗಿಗಳು: ವಿಡಿಯೊ ವೈರಲ್‌ 

ಏಜೆನ್ಸೀಸ್
Published 5 ಮೇ 2019, 8:55 IST
Last Updated 5 ಮೇ 2019, 8:55 IST
   

ನವದೆಹಲಿ: ಬಾಳಾಕೋಟ್‌ ಮೇಲಿನ ಭಾರತೀಯ ವಾಯು ಸೇನೆಯ ದಾಳಿಯ ನಂತರ ಭಾರತದ ವಾಯುಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನತ್ತಿ ಹೋಗಿ ಅಲ್ಲಿಯೇ ಸೆರೆ ಸಿಕ್ಕಿದ್ದ ಭಾರತೀಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿನತಮ್ಮ ಸಹೋದ್ಯೋಗಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆಸಹೋದ್ಯೋಗಿಗಳು ಸೆಲ್ಫಿ ತೆಗೆದುಕೊಳ್ಳುತ್ತಿರುವ ಮತ್ತು ಭಾರತ ಮಾತೆಗೆ ಜೈಕಾರ ಕೂಗುತ್ತಿರುವ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.

ಪಾಕಿಸ್ತಾನದಿಂದ ಬಿಡುಗಡೆಯಾದ ನಂತರದ ದಿನಗಳಲ್ಲಿ ಅಭಿನಂದನ್‌ ವರ್ಧಮಾನ್‌ ಅವರು ಹಲವು ಬಗೆಯ ವೈದ್ಯಕೀಯ ತಪಾಸಣೆಗಳಿಗೆ ಒಳಗಾಗಿದ್ದಾರೆ. ಅವರನ್ನು ಜಮ್ಮು ವಾಯು ನೆಲೆಯಿಂದ ಬೇರೆ ವಾಯು ನೆಲೆಗೆ ವಾಯು ಸೇನೆಯು ವರ್ಗಾವಣೆ ಮಾಡಿದೆ. ಈ ನಡುವೆ ಅಭಿನಂದನ್‌ ಅವರು ಜಮ್ಮು ವಾಯು ನೆಲೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಅದು ಯಾವುತ್ತು ಎಂಬುದು ಖಚಿತವಾಗಿಲ್ಲ.ಅಲ್ಲಿ ಸಹೋದ್ಯೋಗಿಗಳು ಅಭಿನಂದನ್‌ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಅಭಿಮಾನ ಮೆರೆದಿದ್ದಾರೆ. ಅಭಿನಂದನ್‌ ಅವರೂ ಸಂಭ್ರಮದಿಂದ ಸಹೋದ್ಯೋಗಿಗಳೊಂದಿಗೆ ಸೆಲ್ಫಿಗೆ ನಿಲ್ಲುತ್ತಾರೆ. ನಂತರ ಸೈನಿಕರೆಲ್ಲರೂ ಭಾರತ ಮಾತೆಗೆ ಜೈಕಾರ ಕೂಗುತ್ತಾರೆ.

ADVERTISEMENT

ಈ ವೇಳೆ ಸಹೋದ್ಯೋಗಿಯೊಬ್ಬರು ವಿಡಿಯೊ ಮಾಡಿದ್ದಾರೆ.ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ಈ ವಿಡಿಯೊವನ್ನು ಟ್ವೀಟ್‌ ಮಾಡಿದ್ದು, ವಿಡಿಯೊ ಸದ್ಯ ವೈರಲ್‌ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.