ADVERTISEMENT

ಕಾರ್ಗಿಲ್‌ನಲ್ಲಿ ಇದೇ ಮೊದಲ ಬಾರಿ ರಾತ್ರಿ ವೇಳೆ ಇಳಿದ ವಾಯುಪಡೆಯ ಸಿ–130 ಜೆ ವಿಮಾನ

ಪಿಟಿಐ
Published 7 ಜನವರಿ 2024, 13:39 IST
Last Updated 7 ಜನವರಿ 2024, 13:39 IST
ಸಿ–130 ಜೆ ಸೂಪರ್‌ ಹರ್ಕ್ಯುಲಸ್
ಸಿ–130 ಜೆ ಸೂಪರ್‌ ಹರ್ಕ್ಯುಲಸ್   

ನವದೆಹಲಿ: ಭಾರತೀಯ ವಾಯುಪಡೆಯ ಸಿ–130 ಜೆ ಸೂಪರ್‌ ಹರ್ಕ್ಯುಲಸ್ ಸಾಗಣೆ ವಿಮಾನವು ಇದೇ ಮೊದಲ ಬಾರಿ ರಾತ್ರಿ ವೇಳೆ ಕಾರ್ಗಿಲ್‌ನ ಗಡಿ ನಿಯಂತ್ರಣ ರೇಖೆ ಬಳಿಯ ಎತ್ತರದ ಪ್ರದೇಶದಲ್ಲಿರುವ ಏರ್‌ಸ್ಟ್ರಿಪ್‌ನಲ್ಲಿ ಇಳಿದಿದೆ.

ವಾಯುಪಡೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಗರುಡ ಕಮಾಂಡೊಗಳಿದ್ದ ಈ ವಿಮಾನವನ್ನು ಕಾರ್ಗಿಲ್‌ನಲ್ಲಿ ಇಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಅತ್ಯಾಧುನಿಕ ಲ್ಯಾಂಡಿಂಗ್‌ ವ್ಯವಸ್ಥೆಯಲ್ಲಿ (ಎಎಲ್‌ಜಿ) ವಾಯುಪಡೆಯ ಈ ವಿಮಾನವು ಈ ಹಿಂದೆ ಇಳಿದಿದ್ದರೂ ರಾತ್ರಿ ವೇಳೆ ಇಳಿದಿರುವುದು ಇದೇ ಮೊದಲು ಎಂದಿವೆ. ಕಾರ್ಗಿಲ್‌ನ ಏರ್‌ಸ್ಟ್ರಿಪ್‌ ಸುಮಾರು 10,500 ಅಡಿ ಎತ್ತರದಲ್ಲಿದೆ.

ADVERTISEMENT

‘ಗರುಡ ಕಮಾಂಡೊಗಳ ತರಬೇತಿಯ ಅಂಗವಾಗಿ ಸಿ–130 ಜೆ ವಿಮಾನವು ಈಚೆಗೆ ರಾತ್ರಿ ವೇಳೆ ಭೂಪ್ರದೇಶಕ್ಕೆ ಗೋಚರವಾಗದ ರೀತಿಯಲ್ಲಿ ಕಾರ್ಗಿಲ್‌ನಲ್ಲಿ ಇಳಿದಿದೆ’ ಎಂದು ವಾಯುಪಡೆಯು ಎಕ್ಸ್‌ ವೇದಿಕೆಯಲ್ಲಿ ಹೇಳಿದೆ.

ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಸಮೀಪವಿರುವ ಎಎಲ್‌ಜಿಗಳು ಹಾಗೂ ಏರ್‌ಸ್ಟ್ರಿಪ್‌ಗಳ ಮೂಲಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ  ರಕ್ಷಣಾ ಸಚಿವಾಲಯವು ಹೆಚ್ಚಿನ ಗಮನ ಹರಿಸಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.