ADVERTISEMENT

ಮನೆಗೆಲಸ: ಮಹಿಳೆಯರಿಗೇ ಅಧಿಕ

ದಿನಕ್ಕೆ 7.2 ಗಂಟೆ ವೇತನ ರಹಿತ ಕೆಲಸ

ಪಿಟಿಐ
Published 12 ಫೆಬ್ರುವರಿ 2023, 19:10 IST
Last Updated 12 ಫೆಬ್ರುವರಿ 2023, 19:10 IST
.
.   

ಅಹಮದಾಬಾದ್‌ : 15 ವರ್ಷದ ಬಾಲಕಿಯರಿಂದ 60 ವರ್ಷ ವಯೋಮಾನದ ಮಹಿಳೆಯರು ದಿನದಲ್ಲಿ 7.2 ಗಂಟೆ ಕಾಲ ವೇತನರಹಿತ ಮನೆಗೆಲಸದಲ್ಲಿ ತೊಡಗಿರುತ್ತಾರೆ. ಇದೇ ವೇಳೆ ಪುರುಷರು 2.8 ಗಂಟೆ ಕಾಲ ವೇತನರಹಿತ ಮನೆಗೆಲಸದಲ್ಲಿ ತೊಡಗಿರುತ್ತಾರೆ ಎಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌– ಅಹಮದಾಬಾದ್‌ (ಐಐಎಂಎ) ಪ್ರಾಧ್ಯಾಪಕರೊಬ್ಬರು
ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ಪ್ರಾಧ್ಯಾಪಕಿ ನಮ್ರತಾ ಚಿಂದಾರ್ಕರ್‌ ಈ ಸಂಶೋಧನೆಯನ್ನು ನಡೆಸಿದ್ದಾರೆ. ವೇತನ ಪಡೆಯುವ ಉದ್ಯೋಗದಲ್ಲಿರುವ ಮಹಿಳೆ ಕೂಡಾ ಉದ್ಯೋಗದಲ್ಲಿರುವ ಪುರಷನಿಗಿಂತ ಎರಡು ಪಟ್ಟು ಹೆಚ್ಚು ಸಮಯವನ್ನು ಮನೆ ಕೆಲಸಗಳಾದ ಮನೆ ಸ್ವಚ್ಛಗೊಳಿಸುವಿಕೆ, ಅಡುಗೆ ತಯಾರಿ, ಲಾಲನೆ ಪಾಲನೆಯಂಥ ಕೆಲಸದಲ್ಲಿ ತೊಡಗಿರುತ್ತಾರೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎಸ್‌ಎಸ್‌ಎಸ್‌ಒ) ಸಮಯ ಆಧಾರಿತ ಸಮೀಕ್ಷೆಯಿಂದ (ಟಿಯುಎಸ್‌) ತಿಳಿದು
ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಮನೆಗೆಲಸಗಳಲ್ಲಿ ಮಹಿಳೆಯರು ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಎಂಬುದು ಈಗಾಗಲೇ ತಿಳಿದಿರುವ ವಿಚಾರವಾದರೂ, ‘ಸಮಯ ಆಧರಿತ ದತ್ತಾಂಶ: ಲಿಂಗಾಧಾರಿತ ನೀತಿ ವಿಶ್ಲೇಷಣೆಗೆ ಸಾಧನ’ ಎಂಬ ಸಂಶೋಧನೆಯಲ್ಲಿ ಭಾರತೀಯ ಮಹಿಳೆಯು ನಿರ್ದಿಷ್ಟವಾಗಿ ಎಷ್ಟು ಸಮಯವನ್ನು ಮನೆಗೆಲಸಗಳಿಗೆ ಮೀಸಲಿಟ್ಟಿದ್ದಾಳೆ ಎಂಬುದನ್ನು ಮೊದಲ ಬಾರಿಗೆ ಮಾಪನ ಮಾಡಲಾಗಿದೆ. ಇದಕ್ಕಾಗಿ ಬೆಳಿಗ್ಗೆ 4 ಗಂಟೆಯಿಂದ ಮರುದಿನ ಬೆಳಿಗ್ಗೆ 4 ಗಂಟೆವರೆಗಿನ 24 ಗಂಟೆಗಳಲ್ಲಿ ಮಹಿಳೆಯರು ಮತ್ತು ಪುರುಷರ ದೈನಂದಿನ ಚಟುವಟಿಕೆಗಳ ಅವಧಿಯ ದತ್ತಾಂಶವನ್ನು ಸಂಗ್ರಹಿಸಲಾಗಿತ್ತು ಎಂದು ನಮ್ರತ ತಿಳಿಸಿದ್ದಾರೆ.

ADVERTISEMENT

ವಾರದಲ್ಲಿ 50 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ಅದನ್ನು ‘ಸಮಯದ ಅಭಾವ’ ಎಂದು ಕರೆಯ
ಲಾಗುತ್ತದೆ. ಪುರುಷರಿಗೆ ಹೋಲಿಸಿ
ದರೆ ಮಹಿಳೆಯರು ಶೇ24ರಷ್ಟು ಕಡಿಮೆ
ಬಿಡುವಿನ ಅವಧಿಯನ್ನು ಹೊಂದಿರು
ತ್ತಾರೆ. ಅಡುಗೆ ಮಾಡಲು ಅಡುಗೆ ಅನಿಲ ಅಥವಾ ಇನ್ಯಾವುದಾದರೂ ಆಧುನಿಕ ಸೌಲಭ್ಯ ಹೊಂದಿರುವ ಮಹಿಳೆಯರು ಈ ಸೌಲಭ್ಯಗಳನನ್ನು ಹೊಂದಿರದ ಮಹಿಳೆಯರಿಗಿಂತ 41ರಿಂದ 80 ನಿಮಿಷ ಹೆಚ್ಚು ಬಿಡುವು ಪಡೆಯುತ್ತಾರೆ ಎಂದು ಸಹ ಈ ಅಧ್ಯಯನದಲ್ಲಿ
ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.