ADVERTISEMENT

ಐಐಟಿ ಖರಗ್‌ಪುರ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 15:26 IST
Last Updated 8 ಏಪ್ರಿಲ್ 2022, 15:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿರುವ ಐಐಟಿ ಖರಗ್‌ಪುರ ಸಂಸ್ಥೆಯು ಎಂಜಿನಿಯರಿಂಗ್‌ ವಿಷಯಗಳ ಅಧ್ಯಯನಕ್ಕಾಗಿ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂದು 'ಕ್ಯೂಎಸ್‌ ವರ್ಲ್ಡ್‌ ಯುನಿವರ್ಸಿಟಿ ರ‍್ಯಾಂಕಿಂಗ್‌' ಹೇಳಿದೆ.

ಖನಿಜ ಮತ್ತು ಗಣಿ ಎಂಜಿನಿಯರಿಂಗ್‌ ವಿಭಾಗದಲ್ಲಿ 2021ರಲ್ಲಿ 44ನೇ ಸ್ಥಾನದಲ್ಲಿದ್ದ ಸಂಸ್ಥೆಯು ಸದ್ಯ 37ನೇ ಸ್ಥಾನಕ್ಕೆ ಜಿಗಿದಿದೆ. ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ 2021ರಲ್ಲಿ ಇದ್ದ 90ನೇ ಸ್ಥಾನದಿಂದ ಈ ವರ್ಷ 80ಕ್ಕೇರಿದೆ ಎಂದು ಐಐಟಿ ಖರಗ್‌ಪುರ ಪ್ರಕಟಿಸಿದೆ.

'ಕ್ಯೂಎಸ್‌ ವರ್ಲ್ಡ್‌ ಯುನಿವರ್ಸಿಟಿ ರ‍್ಯಾಂಕಿಂಗ್‌' ಏ. 6ರಂದು ಪ್ರಕಟಿಸಿರುವ ಪಟ್ಟಿಯ ಪ್ರಕಾರ, ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಸಂಸ್ಥೆಯು ವಿಶ್ವದಲ್ಲೇ 101ನೇ ಮತ್ತು ಭಾರತದಲ್ಲಿ ಮೂರನೇ ಶ್ರೇಯಾಂಕ ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.