ADVERTISEMENT

ಐಐಟಿ–ಎಂ ಘಟಿಕೋತ್ಸವದಲ್ಲಿ ಪ್ಯಾಲೆಸ್ಟೀನ್‌ ವಿಷಯ ಪ್ರಸ್ತಾಪ‍

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:58 IST
Last Updated 19 ಜುಲೈ 2024, 15:58 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಯಿಟರ್ಸ್‌ ಚಿತ್ರ

ಚೆನ್ನೈ: ಮದ್ರಾಸ್‌ ಐಐಟಿ ಘಟಿಕೋತ್ಸವದಲ್ಲಿ ವಿದ್ಯಾರ್ಥಿಯೊಬ್ಬ ಪ್ಯಾಲೆಸ್ಟೀನ್‌–ಇಸ್ರೇಲ್‌ ಯುದ್ಧದ ವಿಷಯ ಪ್ರಸ್ತಾಪಿಸಿದ್ದಾರೆ.

ADVERTISEMENT

‘ಎಂಜಿನಿಯರುಗಳು ತಾವು ಕೆಲಸ ಮಾಡುವ ಕಂಪನಿಗಳ ಬಗ್ಗೆ ಜಾಗೃತರಾಗಿರಬೇಕು. ಕೆಲ ಕಂಪನಿಗಳು ಇಸ್ರೇಲ್‌ನಂತಹ ಸಾಮ್ರಾಜ್ಯಶಾಹಿ ಆಡಳಿತಗಳಿಗೆ ನೆರವು ನೀಡುತ್ತವೆ’ ಎಂದು ಹೇಳಿದ್ದಾರೆ. 

ರಾಜ್ಯಪಾಲರ ಪ್ರಶಸ್ತಿ ಪುರಸ್ಕೃತ, ಮೆಕಾನಿಕಲ್‌ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಧನಂಜಯ್‌ ಬಾಲಕೃಷ್ಣನ್, ಹೀಗೆ ಯುದ್ಧದ ವಿಷಯ ಪ್ರಸ್ತಾಪಿಸಿ ಸಭಿಕರ ಗಮನಸೆಳೆದರು.

ಪ್ಯಾಲೆಸ್ಟೀನ್‌ನಲ್ಲಿ ಸದ್ಯ ಸಾಮೂಹಿಕ ನರಮೇಧ ನಡೆದಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ಇದಕ್ಕೆ ಕೊನೆಯೇ ಇಲ್ಲವಾಗಿದೆ ಎಂದರು.

‘ಈ ಬಗ್ಗೆ ನಾವೇಕೆ ಯೋಚಿಸಬೇಕು ಎಂದು ನೀವು ಪ್ರಶ್ನಿಸಬಹುದು. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡಲು ಕಠಿಣ ಶ್ರಮ ಪಡುತ್ತಾರೆ. ಈ ಸಂಸ್ಥೆಗಳು ದೊಡ್ಡ ಅನುಕೂಲಗಳನ್ನು ಕಲ್ಪಿಸುತ್ತೇವೆ. ಆದರೆ, ಇದೇ ಸಂಸ್ಥೆಗಳು ನಮ್ಮ ಜೀವನದ ಬಹುತೇಕ ಅಂಶಗಳನ್ನು ನಿಯಂತ್ರಿಸುತ್ತಿವೆ. ಬಹುತೇಕ ಪ್ರತಿಷ್ಠಿತ ಕಂಪನಿಗಳು ಪ್ರತ್ಯಕ್ಷ, ಪರೋಕ್ಷವಾಗಿ ನಾಗರಿಕರನ್ನು ಕೊಲ್ಲಲು ಪ್ಯಾಲೆಸ್ಟೀನ್‌ ವಿರುದ್ಧದ ಯುದ್ಧದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಒದಗಿಸುತ್ತಿವೆ’ ಎಂದು ಅಭಿಪ್ರಾಯಪಟ್ಟರು. 

ಪರಿಹಾರವು ಇದೆ. ನನ್ನಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರವಿಲ್ಲ. ಇಷ್ಟು ಗೊತ್ತಿದೆ. ಎಂಜಿನಿಯರಿಂಗ್ ಪದವೀಧರನಾಗಿ ವಾಸ್ತವ ಜಗತ್ತಿಗೆ ಪದಾರ್ಪಣೆ ಮಾಡುವಾಗ ನಾವು ಮಾಡುವ ಕೆಲಸ ಏನು ಪರಿಣಾಮ ಬೀರಬಹುದು ಎಂಬ ಅರಿವಿರಬೇಕು. ಇಂತಹ ಸಂಕೀರ್ಣ ವ್ಯವಸ್ಥೆಯಲ್ಲಿ ನಮ್ಮ ಸ್ಥಾನವನ್ನು ಗುರುತಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.