ADVERTISEMENT

ಭಾರಿ ಮಳೆ ಮುನ್ಸೂಚನೆ; ಮುಂಬೈನಲ್ಲಿ ‘ರೆಡ್‌ ಅಲರ್ಟ್‌‘ ಘೋಷಣೆ

ಪಿಟಿಐ
Published 21 ಜುಲೈ 2021, 10:40 IST
Last Updated 21 ಜುಲೈ 2021, 10:40 IST
ಮುಂಬೈನ ಸಮುದ್ರ ತೀರದಲ್ಲಿ ಬುಧವಾರ ಮಹಿಳೆಯೊಬ್ಬರು ಮಳೆಯನ್ನು ಆಸ್ವಾದಿಸುತ್ತಿರುವ ದೃಶ್ಯ.
ಮುಂಬೈನ ಸಮುದ್ರ ತೀರದಲ್ಲಿ ಬುಧವಾರ ಮಹಿಳೆಯೊಬ್ಬರು ಮಳೆಯನ್ನು ಆಸ್ವಾದಿಸುತ್ತಿರುವ ದೃಶ್ಯ.   

ಮುಂಬೈ: ಭಾರಿ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯ, ಪ್ರಾದೇಶಿಕ ಹವಾಮಾನ ಕೇಂದ್ರ ಬುಧವಾರ ವಾಣಿಜ್ಯ ನಗರಿ ಮುಂಬೈನಲ್ಲಿ ರೆಡ್‌ ಅಲರ್ಟ್‌ ಘೋಷಿಸಿದೆ.

ಇದಕ್ಕೂ ಮುನ್ನ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್‌‘ ಘೋಷಿಸಿತ್ತು, ಆದರೆ, ‘ಭಾರಿ ಮಳೆಗೆ ಪೂರಕ ವಾತಾವರಣ‘ ಉಂಟಾದ ಕಾರಣ ಈಗ ‘ರೆಡ್‌ ಅಲರ್ಟ್‌‘ ಘೋಷಿಸಲಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಮುಖ್ಯಸ್ಥ ಡಾ. ಜಯಂತ್ ಸರ್ಕಾರ್ ತಿಳಿಸಿದ್ದಾರೆ. ಮುಂಬೈನಲ್ಲಿ ಭಾನುವಾರ ಮತ್ತು ಸೋಮವಾರ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿತ್ತು.

‌‘ಮುಂಬೈನಲ್ಲಿ ಬುಧವಾರ ಮತ್ತು ಮುಂದಿನ ಕೆಲ ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಗುಜರಾತ್‌ನ ಕರಾವಳಿಯಿಂದ ಕರ್ನಾಟಕದವರೆಗಿನ ತೀರದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ‘ ಎಂದು ಸರ್ಕಾರ್ ಹೇಳಿದರು. ಮಳೆ ಗಾಳಿಯ ಮುನ್ಸೂಚನೆಯೂ ಕೂಡ ಮುಂಬೈ ಮತ್ತಿತತರ ಪ್ರದೇಶಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರದ ಮಧ್ಯ ಭಾಗ ಮತ್ತು ಕೊಂಕಣ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ‘ ಎಂದು ಸರ್ಕಾರ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.