ರಾಷ್ಟ್ರಪತಿ ಭವನ
ನವದೆಹಲಿ: ‘ವಲಸಿಗರು ಮತ್ತು ವಿದೇಶಿಯರ ಮಸೂದೆ 2025’ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಅಂಕಿತ ಹಾಕಿದ್ದು, ಕೇಂದ್ರ ಈ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಈಗ ಇದು ಕಾಯ್ದೆಯಾಗಿದೆ. ಇದರ ಪ್ರಕಾರ, ನಕಲಿ ಪಾಸ್‌ಪೋರ್ಟ್ ಅಥವಾ ವೀಸಾ ಬಳಸಿ ದೇಶಕ್ಕೆ ಬಂದಿರುವ ಅಥವಾ ದೇಶದಲ್ಲಿ ನೆಲೆಯೂರಿರುವ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಏಳು ವರ್ಷ ಸಜೆ ಮತ್ತು ₹10 ಲಕ್ಷದವರೆಗೂ ದಂಡ ವಿಧಿಸಲು ಅವಕಾಶವಿದೆ.
ವಿದೇಶಿಗರ ಚಲನೆ, ವಾಸ್ತವ್ಯ ಕುರಿತು ಕಣ್ಗಾವಲು ಇಡುವುದಕ್ಕೆ ಪೂರಕವಾಗಿ ಹೋಟೆಲ್‌ಗಳು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ನರ್ಸಿಂಗ್ ಹೋಂಗಳವರು ವಿದೇಶಿಯರ ಕುರಿತು ಮಾಹಿತಿ ಒದಗಿಸುವುದೂ ಈ ಕಾಯ್ದೆಯಡಿ ಕಡ್ಡಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.