ADVERTISEMENT

ಉತ್ತರಾಖಂಡ ಸಚಿವ ಅಗರವಾಲ್‌ ರಾಜೀನಾಮೆ

ಪಿಟಿಐ
Published 16 ಮಾರ್ಚ್ 2025, 14:30 IST
Last Updated 16 ಮಾರ್ಚ್ 2025, 14:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಡೆಹ್ರಾಡೂನ್(ಉತ್ತರಾಖಂಡ): ಉತ್ತರಾಖಂಡದ ಪರ್ವತ ಪ್ರದೇಶಗಳ ಕುರಿತು ತಾವು ನೀಡಿದ್ದ ಹೇಳಿಕೆ ವಿವಾದ ಸ್ವರೂಪ ಪಡೆದು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಹಣಕಾಸು ಸಚಿವ ಪ್ರೇಮಚಂದ್ ಅಗರವಾಲ್ ತಮ್ಮ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ಪುಷ್ಕರ ಸಿಂಗ್‌ ಧಾಮಿ ಅವರ ಗೃಹ ಕಚೇರಿಗೆ ತೆರಳಿ, ಅಗರವಾಲ್‌ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಫೆಬ್ರುವರಿಯಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲಿ ಮಾತನಾಡುವ ವೇಳೆ, ಕಾಂಗ್ರೆಸ್‌ ಶಾಸಕ ಮದನ್‌ ಬಿಷ್ಟ್ ಅವರು ಸಚಿವ ಅಗರವಾಲ್‌ ವಿರುದ್ಧ ಟೀಕೆ ಮಾಡಿದ್ದರು.

ಬಿಷ್ಟ್‌ ಮಾತಿಗೆ ಆಕ್ರೋಶಗೊಂಡು ಪ್ರತಿಕ್ರಿಯೆ ನೀಡಿದ್ದ ಅಗರವಾಲ್, ‘ಪರ್ವತ ಪ್ರದೇಶಗಳ ಜನರಿಗಾಗಿ ಉತ್ತರಾಖಂಡ ರಾಜ್ಯ ರಚಿಸಲಾಗಿದೆಯೇ? ಮುಂದೊಂದು ದಿನ ಪರ್ವತ ಪ್ರದೇಶ ಹಾಗೂ ಬಯಲು ಸೀಮೆ ಎಂಬುದಾಗಿ ಈ ರಾಜ್ಯ ಇಬ್ಭಾಗವಾಗುವುದನ್ನು ನೋಡುವುದಕ್ಕಾಗಿ ನಾನು ಹೋರಾಟ ನಡೆಸಿಲ್ಲ’ ಎಂದಿದ್ದರು.

ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ, ರಾಜ್ಯದ ಪರ್ವತ ಪ್ರದೇಶಗಳ ಜನರು ಅಗರವಾಲ್‌ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ನಂತರ, ಅಗರವಾಲ್‌ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. ಪಕ್ಷದ ರಾಜ್ಯ ಘಟಕ ಕೂಡ ಅಗರವಾಲ್‌ ಅವರಿಗೆ ಎಚ್ಚರಿಕೆ ನೀಡಿತ್ತಲ್ಲದೇ, ಸಂಯಮ ಕಾಯ್ದುಕೊಳ್ಳುವಂತೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.