
ನವದೆಹಲಿ: 2014ರಿಂದ 2025ರ ನವೆಂಬರ್‌ರವರೆಗೆ ಬಾಂಗ್ಲಾದೇಶ, ಪಾಕಿಸ್ತಾನ, ಮ್ಯಾನ್ಮಾರ್, ಭೂತಾನ್ ಮತ್ತು ನೇಪಾಳದೊಂದಿಗಿನ ಭಾರತದ ಗಡಿಗಳಲ್ಲಿ ಸುಮಾರು 9,700 ಒಳನುಸುಳುವಿಕೆ ಪ್ರಯತ್ನ ಪ್ರಕರಣಗಳು ನಡೆದಿದ್ದು, 25,000 ಮಂದಿಯನ್ನು ಬಂಧಿಸಲಾಗಿದೆ. ಆದರೆ ಭಾರತ-ಚೀನಾ ಗಡಿಯಲ್ಲಿ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ಗೃಹ ಸಚಿವಾಲಯದ ದತ್ತಾಂಶದ ಪ್ರಕಾರ, 2014ರ ಜನವರಿಯಿಂದ 2025ರ ನವೆಂಬರ್‌ರವರೆಗೆ ಭಾರತ-ಬಾಂಗ್ಲಾದೇಶ ಗಡಿಯಲ್ಲಿ 8,632 ಒಳನುಸುಳುವಿಕೆ ಯತ್ನ ಪ್ರಕರಣಗಳು ವರದಿಯಾಗಿದ್ದು, ಒಟ್ಟು 21,407 ಜನರನ್ನು ಬಂಧಿಸಲಾಗಿದೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ 457 ನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದ್ದು, 605 ಜನರನ್ನು ಬಂಧಿಸಲಾಗಿದೆ.
ಭಾರತ-ಮ್ಯಾನ್ಮಾರ್ ಗಡಿಯಲ್ಲಿ 393 ಒಳನುಸುಳುವಿಕೆ ಪ್ರಯತ್ನಗಳು ನಡೆದಿದ್ದು, 2,602 ಜನರನ್ನು ಬಂಧಿಸಲಾಗಿದೆ.
ಭೂತಾನ್ ಮತ್ತು ನೇಪಾಳದ ಗಡಿಗಳಲ್ಲಿ 211 ಘಟನೆಗಳು ನಡೆದಿದ್ದು, 312 ಜನರನ್ನು ಬಂಧಿಸಲಾಗಿದೆ.
ಗೃಹ ವ್ಯವಹಾರಗಳ ಸಚಿವಾಲಯದ ದತ್ತಾಂಶಗಳ ಪ್ರಕಾರ, 2025ರ ಮೊದಲ 11 ತಿಂಗಳಲ್ಲಿ(ಜನವರಿಯಿಂದ ನವೆಂಬರ್) ಭಾರತ–ಬಾಂಗ್ಲಾ ಗಡಿಯಲ್ಲಿ 1,104 ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ. 2024ರಲ್ಲಿ 977, 2023ರಲ್ಲಿ 746 ಪ್ರಕರಣಗಳು ವರದಿಯಾಗಿವೆ. ಕಳೆದ 11 ವರ್ಷಗಳಲ್ಲಿ ಒಟ್ಟು 8,632 ಒಳನುಸುಳುವಿಕೆ ಪ್ರಯತ್ನಗಳು ನಡೆದಿದ್ದು, ಒಟ್ಟು 21,407 ಜನರನ್ನು ಬಂಧಿಸಲಾಗಿದೆ.
ಈ ಅವಧಿಯಲ್ಲಿ ಒಟ್ಟಾರೆಯಾಗಿ 9,693 ಒಳನುಸುಳುವಿಕೆ ಪ್ರಯತ್ನಗಳು ನಡೆದಿದ್ದು, ಒಟ್ಟು 24,926 ಜನರನ್ನು ಬಂಧಿಸಲಾಗಿದೆ. ಆ ಪೈಕಿ ಬಾಂಗ್ಲಾ ಗಡಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
2025ರಲ್ಲಿ (ನವೆಂಬರ್‌ವರೆಗೆ) ಭಾರತ-ಪಾಕಿಸ್ತಾನ ಗಡಿಗಳಲ್ಲಿ 32 ಒಳನುಸುಳುವಿಕೆ ಯತ್ನ ಘಟನೆಗಳು ದಾಖಲಾಗಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ. 2024 ರಲ್ಲಿ 41 ಪ್ರಕರಣಗಳು ಪತ್ತೆಯಾಗಿದ್ದವು. ಕಳೆದ ಸುಮಾರು 11 ವರ್ಷಗಳಲ್ಲಿ 457 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 605 ಜನರನ್ನು ಬಂಧಿಸಲಾಗಿದೆ.
2025ರಲ್ಲಿ (ನವೆಂಬರ್‌ವರೆಗೆ) ಭಾರತ-ಮ್ಯಾನ್ಮಾರ್ ಗಡಿಯಲ್ಲಿ 95 ಒಳನುಸುಳುವಿಕೆ ಯತ್ನಗಳು ನಡೆದಿವೆ. 2024 ರಲ್ಲಿ 37, 2023ರಲ್ಲಿ 40 ಪ್ರಕರಣಗಳು ವರದಿಯಾಗಿವೆ. 2014 ರಿಂದ 2025ರ ವರೆಗೆ ಒಟ್ಟು 393 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 437 ಜನರನ್ನು ಬಂಧಿಸಲಾಗಿದೆ.
2025ರಲ್ಲಿ (ನವೆಂಬರ್‌ವರೆಗೆ) ನೇಪಾಳ ಮತ್ತು ಭೂತಾನ್ ಗಡಿಗಳಲ್ಲಿ, 78 ಪ್ರಕರಣಗಳು ಪತ್ತೆಯಾಗಿವೆ. ಕಳೆದ 11 ವರ್ಷಗಳಲ್ಲಿ ಉಭಯ ದೇಶಗಳೊಂದಿಗಿನ ಗಡಿಗಳಲ್ಲಿ ಸುಮಾರು 211 ನುಸುಳುವಿಕೆ ಪ್ರಯತ್ನಗಳು ನಡೆದಿದ್ದು, 312 ಜನರನ್ನು ಬಂಧಿಸಲಾಗಿದೆ.
| ಒಳನುಸುಳುವಿಕೆ ಯತ್ನ ಪ್ರಕರಣಗಳು | ಬಂಧಿತರ ಸಂಖ್ಯೆ (2014ರ ಜನವರಿ–2025ರ ನವೆಂಬರ್ ವರೆಗೆ) | |
|---|---|---|
| ಭಾರತ-ಬಾಂಗ್ಲಾದೇಶ | 8,632 | 21407 |
| ಭಾರತ-ಪಾಕಿಸ್ತಾನ | 457 | 605 |
| ಭಾರತ-ಮ್ಯಾನ್ಮಾರ್ | 393 | 2,602 |
| ಭಾರತ-ಭೂತಾನ್/ನೇಪಾಳ | 211 | 312 |
| ಒಟ್ಟು | 9,693 | 24,926 |
| 2025 (ಜನವರಿ–ನವೆಂಬರ್ ವರೆಗೆ) | ||
| ಭಾರತ-ಬಾಂಗ್ಲಾದೇಶ | 2,556 | 2,556 |
| ಭಾರತ-ಪಾಕಿಸ್ತಾನ | 32 | 49 |
| ಭಾರತ-ಮ್ಯಾನ್ಮಾರ್ | 95 | 437 |
| ಭಾರತ-ಭೂತಾನ್/ನೇಪಾಳ | 54 | 79 |
| ಒಟ್ಟು | 1,285 | 3,120 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.