
ಅಕ್ಕಿ ಹಾಗೂ ಭತ್ತ
ನವದೆಹಲಿ: ಚೀನಾವನ್ನು ಹಿಂದಿಕ್ಕುವ ಮೂಲಕ ಭಾರತವು, ಜಗತ್ತಿನಲ್ಲೇ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗಿದೆ. ಇದು, ದೇಶದ ಆರ್ಥಿಕತೆಗೆ ಕೃಷಿ ನೀಡುತ್ತಿರುವ ಕೊಡುಗೆಯನ್ನು ಒತ್ತಿ ಹೇಳುತ್ತದೆ.
2024–25ರ ಬೆಳೆ ವರ್ಷದಲ್ಲಿ ಭಾರತದಲ್ಲಿ 15.01 ಕೋಟಿ ಟನ್ ಅಕ್ಕಿ ಉತ್ಪಾದನೆಯಾಗಿದೆ. ಅದೇ ಸಾಲಿನಲ್ಲಿ ಚೀನಾ 14.52 ಕೋಟಿ ಟನ್ ಉತ್ಪಾದನೆ ಮಾಡಿದೆ. ಈ ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ಅಕ್ಕಿ ಉತ್ಪಾದನೆ ಮಾಡಿದ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕಳೆದವಾರ ಹೇಳಿದ್ದರು.
2025–26ರಲ್ಲಿ ಭಾರತ ಅಂದಾಜು 15.20 ಕೋಟಿ ಟನ್ ಹಾಗೂ ಚೀನಾ ಅಂದಾಜು 14.6 ಕೋಟಿ ಟನ್‌ನಷ್ಟು ಅಕ್ಕಿ ಉತ್ಪಾದಿಸಿದೆ.
2025-26ನೇ ಸಾಲಿನಲ್ಲಿ ಭಾರತದಲ್ಲಿ ಅತಿಹೆಚ್ಚು ಅಕ್ಕಿ ಉತ್ಪಾದಿಸಿದ 10 ರಾಜ್ಯಗಳು
| ರಾಜ್ಯ | ಪ್ರಮಾಣ |
|---|---|
| ಉತ್ತರ ಪ್ರದೇಶ | 194.1 ಲಕ್ಷ ಟನ್ |
| ಪಂಜಾಬ್ | 136.67 ಲಕ್ಷ ಟನ್ |
| ಪಶ್ಚಿಮ ಬಂಗಾಳ | 118.54 ಲಕ್ಷ ಟನ್ |
| ಮಧ್ಯಪ್ರದೇಶ | 97.11 ಲಕ್ಷ ಟನ್ |
| ತೆಲಂಗಾಣ | 96.35 ಲಕ್ಷ ಟನ್ |
| ಛತ್ತೀಸಗಢ | 89.17 ಲಕ್ಷ ಟನ್ |
| ಒಡಿಶಾ | 84.54 ಲಕ್ಷ ಟನ್ |
| ಬಿಹಾರ | 82.49 ಲಕ್ಷ ಟನ್ |
| ಹರಿಯಾಣ | 63.71 ಲಕ್ಷ ಟನ್ |
| ಆಂಧ್ರ ಪ್ರದೇಶ | 52.92 ಲಕ್ಷ ಟನ್ |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.