ADVERTISEMENT

ಅಮೆರಿಕ ಬಳಿಕ 20 ಕೋಟಿ ಡೋಸ್ ಲಸಿಕೆ ವಿತರಿಸಿದ 2ನೇ ದೇಶ ಭಾರತ

ಪಿಟಿಐ
Published 26 ಮೇ 2021, 14:30 IST
Last Updated 26 ಮೇ 2021, 14:30 IST
ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತಿರುವ ಯುವತಿ: ಪ್ರಜಾವಾಣಿ ಚಿತ್ರ
ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತಿರುವ ಯುವತಿ: ಪ್ರಜಾವಾಣಿ ಚಿತ್ರ   

ನವದೆಹಲಿ: ಅಮೆರಿಕ ಬಳಿಕ 20 ಕೋಟಿ ಡೋಸ್ ಲಸಿಕೆ ವಿತರಿಸಿದ ಎರಡನೇ ರಾಷ್ಟ್ರ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

124 ದಿನಗಳಲ್ಲಿ ಅಮೆರಿಕವು ಈ ಸಾಧನೆ ಮಾಡಿದರೆ, ಭಾರತವು 130 ದಿನಗಳಲ್ಲಿ ಈ ವ್ಯಾಪ್ತಿಯನ್ನು ಸಾಧಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಲಭ್ಯವಿರುವ ಜಾಗತಿಕ ಮಾಹಿತಿ ಪ್ರಕಾರ, 168 ದಿನಗಳಲ್ಲಿ ಬ್ರಿಟನ್ 5.1 ಕೋಟಿ ಡೋಸ್ ಲಸಿಕೆ ನೀಡಿದೆ. ಬ್ರೆಜಿಲ್ 128 ದಿನಗಳಲ್ಲಿ 5.9 ಕೋಟಿ ಡೋಸ್ ಮತ್ತು ಜರ್ಮನಿ 149 ದಿನಗಳಲ್ಲಿ 4.9 ಕೋಟಿ ಡೋಸ್ ಲಸಿಕೆ ನೀಡಿದೆ.

ADVERTISEMENT

ಲಸಿಕಾ ಅಭಿಯಾನದ 130 ನೇ ದಿನದ ಹೊತ್ತಿಗೆ ಭಾರತದಲ್ಲಿ ಲಸಿಕೆ ನೀಡಿಕೆಯ ವ್ಯಾಪ್ತಿ 20 ಕೋಟಿ ಡೋಸ್ ಗಡಿ ದಾಟಿದೆ (15,71,49,593 ಮೊದಲ ಡೋಸ್ ಮತ್ತು 4,35,12,863 ಎರಡನೇ ಡೋಸ್ ಪಡೆದಿರುವವರು ಒಳಗೊಂಡಂತೆ 20,06,62,456 ಡೋಸ್) ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ತಿಳಿಸಿದೆ.

45 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಶೇಕಡಾ 34 ಕ್ಕಿಂತ ಹೆಚ್ಚು ಜನರು ಇಲ್ಲಿಯವರೆಗೆ ಭಾರತದಲ್ಲಿ ಕನಿಷ್ಠ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಅಂತೆಯೇ, 60 ವರ್ಷ ಮೇಲ್ಪಟ್ಟ ಜನಸಂಖ್ಯೆಯ ಶೇಕಡಾ 42 ಕ್ಕಿಂತಲೂ ಹೆಚ್ಚು ಜನರು ಕನಿಷ್ಠ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 16 ರಂದು ಭಾರತದಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.

ಮೇಡ್ ಇನ್ ಇಂಡಿಯಾ ಲಸಿಕೆಗಳಾ್ದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಮತ್ತು ತುರ್ತು ಬಳಕೆಗೆ ಭಾರತದ ಔಷಧ ನಿಯಂತ್ರಕ(ಡಿಸಿಜಿಐ)ದಿಂದ ಅನುಮೋದನೆ ಪಡೆದಿರುವ ರಷ್ಯಾದ ಸ್ಪುಟ್ನಿಕ್ ವಿ ಸೇರಿ ಮೂರು ಲಸಿಕೆಗಳನ್ನು ಲಸಿಕಾ ಅಭಿಯಾನದಲ್ಲಿ ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.