ADVERTISEMENT

ಬಿಎಸ್ಎಫ್‌ಗೆ ಶಾಶ್ವತ ಬಂಕರ್‌ ನಿರ್ಮಾಣ 

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 14:15 IST
Last Updated 2 ಜನವರಿ 2023, 14:15 IST
..
..   

ನವದೆಹಲಿ: ಗುಜರಾತ್‌ನ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಸರ್ ಕ್ರೀಕ್ ಮತ್ತು ‘ಹರಾಮಿ ನಲ್ಲಾ’ ಜೌಗು ಪ್ರದೇಶ ಹೊಂದಿಕೊಂಡಂತೆ ಬಿಎಸ್‌ಎಫ್ ಪಡೆಗಳಿಗೆ‌ ಮೊದಲ ಬಾರಿಗೆ ಭಾರತ ಕಾಂಕ್ರೀಟ್‌ನ ‘ಶಾಶ್ವತ ಬಂಕರ್‌’ಗಳನ್ನು ನಿರ್ಮಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಮೀನುಗಾರರ ನಿರಂತರ ಒಳನುಸುಳುವಿಕೆ ಮತ್ತು ಮೀನುಗಾರಿಕಾ ದೋಣಿಗಳ ದೃಷ್ಟಿಯಿಂದ ಭುಜ್ ವಲಯದ ಉದ್ದಕ್ಕೂ ಎಂಟು ಬಹುಮಹಡಿ ಬಂಕರ್‌ಗಳು ಮತ್ತು ವೀಕ್ಷಣಾ ಪೋಸ್ಟ್‌ಗಳ ನಿರ್ಮಾಣಕ್ಕಾಗಿ ಕೇಂದ್ರ ಗೃಹ ಸಚಿವಾಲಯ ₹ 50 ಕೋಟಿ ಮಂಜೂರು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಅಂಕಿ ಅಂಶಗಳ ಪ್ರಕಾರ, ಗಡಿ ಭದ್ರತಾ ಪಡೆ (ಬಿಎಸ್‌ಎಫ್ ) 2022ರಲ್ಲಿ ಗುಜರಾತ್‌ನ ಈ ಪ್ರದೇಶದಿಂದ 22 ಪಾಕ್‌ ಮೀನುಗಾರರನ್ನು ಬಂಧಿಸಿ, 79 ಮೀನುಗಾರಿಕಾ ದೋಣಿಗಳು ಮತ್ತು 250 ಕೋಟಿ ಮೌಲ್ಯದ ಹೆರಾಯಿನ್, 2.49 ಕೋಟಿ ಮೌಲ್ಯದ ಚರಸ್ ಅನ್ನು ವಶಪಡಿಸಿಕೊಂಡಿದೆ.

ADVERTISEMENT

ಅಧಿಕಾರಿಗಳ ಪ್ರಕಾರ, ಈ ಬಂಕರ್‌ಗಳನ್ನು ಲಖಪತ್ ವಾರಿ ಬೆಟ್, ದಫಾ ಬೆಟ್ ಮತ್ತು ಸಮುದ್ರ ಬೆಟ್‌ಗಳಲ್ಲಿ ನಿರ್ಮಿಸಲಾಗುತ್ತಿದೆ. ಇದು ಭಾರತದ ಭೂಪ್ರದೇಶದೊಳಗೆ ಕೊರಕಲು ಪ್ರದೇಶದ ಪೂರ್ವ ಭಾಗದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.