ADVERTISEMENT

Covid-19 India Update: ದೇಶದಲ್ಲಿ 55,342 ಹೊಸ ಪ್ರಕರಣಗಳು

ಏಜೆನ್ಸೀಸ್
Published 13 ಅಕ್ಟೋಬರ್ 2020, 4:52 IST
Last Updated 13 ಅಕ್ಟೋಬರ್ 2020, 4:52 IST
ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಗೆ ಸಿದ್ಧತೆ ನಡೆದಿದ್ದು, ಪಿಪಿಇ ಕಿಟ್‌ ಧರಿಸಿರುವ ಸಿಬ್ಬಂದಿ ಸ್ಥಳವನ್ನು ಸೋಂಕು ಮುಕ್ತಗೊಳಿಸುವ ಕಾರ್ಯ ನಡೆಸಿದರು
ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಗೆ ಸಿದ್ಧತೆ ನಡೆದಿದ್ದು, ಪಿಪಿಇ ಕಿಟ್‌ ಧರಿಸಿರುವ ಸಿಬ್ಬಂದಿ ಸ್ಥಳವನ್ನು ಸೋಂಕು ಮುಕ್ತಗೊಳಿಸುವ ಕಾರ್ಯ ನಡೆಸಿದರು   

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌–19 ದೃಢಪಟ್ಟ 55,342 ಹೊಸ ಪ್ರಕರಣಗಳು ದಾಖಲಾಗಿವೆ. ನಿತ್ಯದ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಕಂಡು ಬಂದಿದ್ದು, ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ 86ಕ್ಕಿಂತಲೂ ಹೆಚ್ಚಿರುವುದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ–ಅಂಶಗಳಿಂದ ತಿಳಿದು ಬಂದಿದೆ.

ಒಟ್ಟು 71,75,881 ಪ್ರಕರಣಗಳ ಪೈಕಿ 62,27,296 ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೂ 1,09,856 ಮಂದಿ ಸಾವಿಗೀಡಾಗಿದ್ದು, ಕಳೆದ 24 ಗಂಟೆಗಳಲ್ಲಿ 706 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಪ್ರಸ್ತುತ ದೇಶದಲ್ಲಿ 8,38,729 ಸಕ್ರಿಯ ಪ್ರಕರಣಗಳಿವೆ.

ADVERTISEMENT

ದೇಶದಲ್ಲಿ ಸೆಪ್ಟೆಂಬರ್‌ 16ಕ್ಕೆ 50 ಲಕ್ಷ ಕೋವಿಡ್‌ ಪ್ರಕರಣಗಳು ದಾಖಲಾದರೆ, ಸೆಪ್ಟೆಂಬರ್‌ 28ಕ್ಕೆ 60 ಲಕ್ಷ ಹಾಗೂ ಅಕ್ಟೋಬರ್ 11ರಂದು ಪ್ರಕರಣಗಳ ಸಂಖ್ಯೆ 70 ಲಕ್ಷ ದಾಟಿತು.

ಐಸಿಎಂಆರ್‌ ಪ್ರಕಾರ, ಅಕ್ಟೋಬರ್‌ 12ರ ವರೆಗೂ ದೇಶದಲ್ಲಿ 8,89,45,107 ಗಂಟಲು ದ್ರವ ಮಾದರಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಸೋಮವಾರ 10,73,014 ಮಾದರಿಗಳ ಪರೀಕ್ಷೆ ನಡೆದಿರುವುದಾಗಿ ಹೇಳಿದೆ.

ದೇಶದಲ್ಲಿ ವರದಿಯಾಗಿರುವ 1,09,856 ಮಂದಿ ಸೋಂಕಿತರ ಸಾವುಗಳ ಪೈಕಿ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 40,514 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ10,314 ಜನ, ಕರ್ನಾಟಕದಲ್ಲಿ 10,036 ಜನ, ಉತ್ತರ ಪ್ರದೇಶದಲ್ಲಿ 6,438 ಮಂದಿ, ಆಂಧ್ರ ಪ್ರದೇಶದಲ್ಲಿ 6,256 ಮಂದಿ, ದೆಹಲಿಯಲ್ಲಿ 5,809 ಮಂದಿ, ಪಶ್ಚಿಮ ಬಂಗಾಳದಲ್ಲಿ 5,682 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.